Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಬಾಗಲಕೋಟೆಯಲ್ಲಿ ಉರುಳಿ ಬಿದ್ದ ಹೈಟೆನ್ಶನ್ ಗೋಪುರ : ತಪ್ಪಿತು ಭಾರಿ ಅನಾಹುತ

ಬಾಗಲಕೋಟೆ: ಮುಧೋಳ ತಾಲೂಕು ವಜ್ಜರಮಟ್ಟಿಯ 220 ಕೆವಿ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ 110 ಕೆವಿ ಬೀಳಗಿ (ಕಾತರಕಿ) ಗೋಪುರ ಕೊಪ್ಪ ಗ್ರಾಮದ ಹತ್ತಿರ ರವಿವಾರ ಸಂಜೆ ವೇಳೆ ಆಕಸ್ಮಿಕವಾಗಿ ಹಾನಿಗೊಳಗಾಗಿದೆ‌.

110 ಕೆವಿ ಮಾರ್ಗದ ಮೇಲೆ ಬರುವ ಬೀಳಗಿ, ಕಾತರಕಿ, ಗಿರಿಸಾಗರ, ಬಿಸನಾಳ, ತೋಳಮಟ್ಟಿ, ಶಿರಗುಪ್ಪಿ ಹಾಗೂ 33 ಕೆವಿ ತೆಗ್ಗಿ ಮತ್ತು ಅನಗವಾಡಿ ವಿದ್ಯುತ್‌ ಕೇಂದ್ರಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ಸ್ಥಗಿತವಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಬೀಳಗಿ ತಾಲೂಕಿನ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು, ಸದರಿ ಗೋಪುರ ಮರು ಜೋಡಣೆಯ ಕಾರ್ಯ ಕೈಗೊಳ್ಳಲಾಗಿದ್ದು, ಜೋಡಣೆಯ ಕಾರ್ಯ ಮಂಗಳವಾರ ಸಂಜೆ ಮುಕ್ತಾಯಗೊಂಡು ವಿದ್ಯುತ್‌ ಸರಬರಾಜು ಆಗುವ ಸಾಧ್ಯತೆಗಳಿವೆ.

 

No Comments

Leave A Comment