ಹತ್ರಾಸ್ ಭೇಟಿ: ಭೀಮ್ ಆರ್ಮಿಯ ಮುಖ್ಯಸ್ಥ ಸೇರಿದಂತೆ 400ಕ್ಕೂ ಹೆಚ್ಚು ಜನರ ಮೇಲೆ FIR ದಾಖಲು ನವದೆಹಲಿ: ಹತ್ರಾಸ್ ಅತ್ಯಾಚಾರ ಮತ್ತು ಹತ್ಯೆ ಸಂತ್ರಸ್ಥೆಯ ಕುಟುಂಬಸ್ಥರನ್ನು ಆ.4ರ ಭಾನುವಾರ ಭೇಟಿ ಮಾಡಿದ್ದ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಇತರ 400 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಹತ್ರಾಸ್ ಭೇಟಿಯ ವೇಳೆ 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ಅತೀ ದೊಡ್ಡ ಪ್ರಮಾಣದಲ್ಲಿ ಜನರು ಒಗ್ಗೂಡಿದಕ್ಕಾಗಿ 400ಕ್ಕಿಂತ ಹೆಚ್ಚು ಜನರು ಮೇಲೆ ಪ್ರಕರಣ ದಾಖಲಾಗಿದೆ. ಭೀಮ್ ಆರ್ಮಿಯ ಮುಖ್ಯಸ್ಥ ಅಜಾದ್, ಹತ್ರಾಸ್ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳಿದ್ದ ವೇಳೆ 2 ಬಾರಿ ನಡುದಾರಿಯಲ್ಲಿ ಉತ್ತರಪ್ರದೇಶ ಪೊಲೀಸರು ತಡೆದಿದ್ದರು. ಈ ವೇಳೆ ಪ್ರತಿಭಟನೆಗಿಳಿದ ಆಜಾದ್, ಟ್ರಕ್ ಮೇಲೆ ನಿಂತು ಸಾಮೂಹಿಕ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಭಾರೀ ಪ್ರತಿಭಟನೆಯ ನಂತರ ಭಾನುವಾರ ಸಂಜೆ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ಕಲ್ಪಿಸಿದ್ದರು. ಅದಾಗ್ಯೂ ಈ ಕುರಿತು ಪ್ರತಿಕ್ರಿಯೆ ನೀಡಿದ ಆಜಾದ್ ಹತ್ರಾಸ್ ಗೆ ಕೇವಲ 20 ಕಿ. ಮೀ ದೂರದಲ್ಲಿ ಪೊಲೀಸರು ನನ್ನನ್ನು ಮೊದಲ ಬಾರಿಗೆ ತಡೆದಿದ್ದರು. ಆ ಬಳಿಕ ಕಾಲ್ನಡಿಗೆಯಲ್ಲೇ ಬೆಂಬಲಿಗರೊಂದಿಗೆ 5 ಕಿ. ಮೀ ಕ್ರಮಿಸಲಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು. ನಂತರದಲ್ಲಿ ಪೊಲೀಸರು ಮತ್ತೊಮ್ಮೆ ಅಡ್ಡಪಡಿಸಿ ಕೊನೆಗೂ ಭೇಟಿಗೆ ಕೇವಲ 10 ಜನರಿಗೆ ಅವಕಾಶ ನೀಡಿದರು ಎಂದಿದ್ದಾರೆ. ಕುಟುಂಬಸ್ಥರನ್ನು ಭೇಟಿಯಾದ ವೇಳೆ ಅವರು ತಮಗೆ ವೈ ಪ್ಲಸ್ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು. ಕಂಗಾನಾ ರಣಾವತ್ ಗೆ ವೈ ಪ್ಲಸ್ ಭದ್ರತೆ ನೀಡುವುದಾದರೇ ಸಂತ್ರಸ್ಥೆಯ ಕುಟುಂಬಕ್ಕೆ ಏಕೆ ಸಾಧ್ಯವಾಗುವುದಿಲ್ಲ. ಈ ಕೂಡಲೇ ಸರ್ಕಾರ ಭದ್ರತೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. Share this:TweetWhatsAppEmailPrintTelegram