Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಐಪಿಎಲ್ ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ

ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಐಪಿಎಲ್ ನಲ್ಲಿ 2 ಸಾವಿರ ರನ್ ಮತ್ತು 110 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ  ಭಾಜನರಾಗಿದ್ದಾರೆ.

ಶುಕ್ರವಾರ ನಡೆದ ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಜಡೇಜಾ ಈ ಸಾಧನೆ ಮಾಡಿದ್ದಾರೆ. ಆದರೆ ಜಡೇಜಾ ಪ್ರತಿನಿಧಿಸುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ 7 ರನ್ ಗಳಿಂದ ಪರಾಭವಗೊಂಡಿತು. 165 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ಪರ ಅರ್ಜುನ ಪ್ರಶಸ್ತಿ ವಿಜೇತ ಜಡೇಜಾ ಕೇವಲ 35  ಎಸೆತಗಳಲ್ಲಿ 50 ರನ್ ಪೇರಿಸಿದರು. ಇದರಲ್ಲಿ 2 ಸಿಕ್ಸರ್ ಐದು ಬೌಂಡರಿಗಳು ಸೇರಿದ್ದವು. ಆ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 2000 ರನ್ ಮತ್ತು 110 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.

ಐಪಿಎಲ್ ನಲ್ಲಿ ರವೀಂದ್ರ ಜಡೇಜಾ ಒಟ್ಟು 174 ಪಂದ್ಯಗಳನ್ನಾಡಿದ್ದು, ಈ ಪೈಕಿ ಚೆನ್ನೈ ತಂಡದ ಮೂಲಕ 106 ಪಂದ್ಯವನ್ನು ಮತ್ತು ಗುಜರಾತ್ ಲಯನ್ಸ್ ಮೂಲಕ 27 ಪಂದ್ಯಗಳನ್ನು, ಕೊಚ್ಚಿ ಟಸ್ಕರ್ಸ್ ನಲ್ಲಿ 14 ಮತ್ತು 27 ಪಂದ್ಯವನ್ನು ರಾಜಸ್ತಾನ ರಾಯಲ್ಸ್ ತಂಡದಪರವಾಗಿ ಆಡಿದ್ದಾರೆ.

No Comments

Leave A Comment