Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸ೦ಭ್ರಮದ ಲಕ್ಷದೀಪೋತ್ಸವ... ........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಬೆಳಗಾವಿ ಸವದತ್ತಿಯಲ್ಲಿ ಭೀಕರ ಅಪಘಾತ, 7 ಕೂಲಿ ಕಾರ್ಮಿಕರು ಸಾವು

ಬೆಳಗಾವಿ: ಬೊಲೆರೋ ಹಾಗೂ ಟಾಟಾ ಏಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಕೂಲಿ ಕಾರ್ಮಿಕರು ಪ್ರಾಣಬಿಟ್ಟಿರುವ ಘಟನೆ ಬೆಳಗಾವಿಯ ಸವದತ್ತಿ ಪಟ್ಟಣದ ಸಮೀಪ ನಡೆದಿದೆ.

ಸವದತ್ತಿ ಪಟ್ಟಣ ಹೊರವಲಯದಲ್ಲಿ ಸಂಬವಿಸಿದ ಅಪಘಾತದಲ್ಲಿ ಮೃತರಾದವರೆಲ್ಲರೂ ರಾಮದುರ್ಗ ತಾಲೂಕಿನ ಚಿಂಚನೂರು ಗ್ರಾಮಕ್ಕೆ ಸೇರಿದವರಾಗಿದ್ದು ಕೆಲಸ ಮುಗಿಸಿ ತೆರಳುತ್ತಿದ್ದರೆಂದು ಹೇಳಲಾಗಿದೆ.

ಮೊರಬ್​ನಿಂದ ಸವದತ್ತಿ ಮಾರ್ಗದಿಂದ ರಾಮದುರ್ಗಕ್ಕೆ ತೆರಳುವಾಗ ಸವದತ್ತಿಯಲ್ಲಿ ಧಾರವಾಡದ ಕಡೆ ಹೊರಟಿದ್ದ ಬೊಲೆರೋಗೆ  ಟಾಟಾ ಏಸ್ ಢಿಕ್ಕಿಯಾಗಿದೆ.

ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾನೆ. ಇದಲ್ಲದೆ ಘಟನೆಯಲ್ಲಿ ಹತ್ತಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಘಟನಾ ಸ್ಥಳಕ್ಕೆ  ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ, ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment