Log In
BREAKING NEWS >
ನವೆ೦ಬರ್ 30ಕ್ಕೆ ಮು೦ದಿನ ಶ್ರೀಕೃಷ್ಣಾಪುರ ಮಠದ ಪರ್ಯಾಯಕ್ಕೆ ಬಾಳೆಮುಹೂರ್ತ.....ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಕಲ್ಪನಾ ಚಾವ್ಲಾ ಹೆಸರಿನಲ್ಲಿ ಸರಕು ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿದ ನಾಸಾ: ಭಾರತೀಯರಿಗೆ ಅದ್ಭುತ ಕ್ಷಣ

ವಾಲೋಪ್ಸ್ ದ್ವೀಪ: ಮಾನವ ಬಾಹ್ಯಾಕಾಶ ಹಾರಾಟಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಭಾರತ ಮೂಲದ ಮೃತ ನಾಸಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಹೊತ್ತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆಯನ್ನು ಕಳೆದ ರಾತ್ರಿ ಉಡಾಯಿಸಲಾಗಿದೆ.

ಭಾರತೀಯ ಕಾಲಮಾನ ಕಳೆದ ರಾತ್ರಿ 9.38ಕ್ಕೆ ವರ್ಜಿನಿಯಾದ ನಾಸಾ ವಾಲೋಪ್ಸ್ ಬಾಹ್ಯಾಕಾಶ ಕೇಂದ್ರದ ಮಧ್ಯ-ಅಟ್ಲಾಂಟಿಕ್ ಪ್ರಾದೇಶಿಕ ಬಾಹ್ಯಾಕಾಶ ನಿಲ್ದಾಣ(ಮಾರ್ಸ್)ನಿಂದ ಕಲ್ಪನಾ ಚಾವ್ಲಾ ಹೆಸರಿನ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.

ಎರಡು ದಿನಗಳ ಹಾರಾಟದ ನಂತರ ಬಾಹ್ಯಾಕಾಶ ಕೇಂದ್ರಕ್ಕೆ ಸೇರ್ಪಡೆಯಾಗಲಿದೆ. ಎನ್ ಜಿ-14 ಬಾಹ್ಯಾಕಾಶ ನೌಕೆ 3 ಸಾವಿರದ 630 ಕಿಲೋ ಗ್ರಾಂ ತೂಕವನ್ನು ಹೊಂದಿದೆ.

ಉಡಾವಣಾ ರಾಕೆಟ್ ಗೆ ಕಲ್ಪನಾರ ಹೆಸರಿಟ್ಟಿರುವುದು ಅತ್ಯಂತ ಖುಷಿಯ ಸಂಗತಿ. ಭಾರತೀಯರು ವಿಶ್ವದ ಇತರರೆದುರು ಹೋರಾಡಿ ಗೆಲುವು ಸಾಧಿಸಬಹುದು, ಯಶಸ್ಸು ಕಾಣಬಹುದು, ಭಾರತೀಯರು ಯಾರಿಗೂ ಕಡಿಮೆಯಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಕಲ್ಪನಾ ಚಾವ್ಲಾ ಅವರ ಪತಿ ಜೀನ್ ಪಿಯರ್ರೆ ಹ್ಯಾರ್ರಿಸನ್ ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

No Comments

Leave A Comment