Log In
BREAKING NEWS >
ಮಾ.5ರ೦ದು ಬೆಳಿಗ್ಗೆ 8ಗ೦ಟೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮ ಜರಗಲಿದೆ....

ಮಧ್ಯಪ್ರದೇಶ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಖಾರ್ಗೋನ್: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆಯೊಂದು ಬುಧವಾರ ರಾತ್ರಿ ನಡೆದಿದೆ.

ಗುಡಿಸಲಿನಲ್ಲಿ ಬಾಲಕಿ ವಾಸವಿದ್ದು, ಇದ್ದಕ್ಕಿದ್ದಂತೆ ಮೂವರು ಕಾಮುಕರು ಗುಡಿಸಲಿಗೆ ನುಗ್ಗಿದ್ದಾರೆ. ಬಳಿಕ ಬಾಲಕಿ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ, ಬಳಿಕ ಬಾಲಕ ನೆರೆಮನೆಯವರ ಸಹಾಯ ಪಡೆಯಲು ಗುಡಿಸಲಿನಿಂದ ಓಡಿ ಬಂದಿದ್ದಾನೆ.

ಬಳಿಕ ಕಾಮುಕರು ಬಾಲಕಿಯನ್ನು ನಿರ್ಜನಪ್ರದೇಶಕ್ಕೆ ಹೊತ್ತೊಯ್ದಿದ್ದು, ಅತ್ಯಾಚಾರವೆಸಗಿ ರಸ್ತೆಯ ಮಧ್ಯೆ ಎಸೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

No Comments

Leave A Comment