Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಕೃಷ್ಣಾಪುರ, ಸೋದೆ ಮಠಾಧೀಶರಿ೦ದ ಶ್ರೀಕೃಷ್ಣಮಠದ ನೂತನ ದರ್ಶನ ಮಾರ್ಗವೀಕ್ಷಣೆ

ಶ್ರೀಕೃಷ್ಣ ಮಠದಲ್ಲಿ, ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥರ ಆಶಯದಂತೆ ,ಕಾಷ್ಠಶಿಲ್ಪ ಹಾಗೂ ಪ್ರಾಚೀನ ಪಾರಂಪರಿಕ ರೀತಿಯಲ್ಲಿ ನಿರ್ಮಾಣಗೊಂಡ ದೇವರ ದರ್ಶನಕ್ಕೆ ಬರುವ ವಿಶೇಷ ದಾರಿಯನ್ನು, ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಗಮಿಸಿ ಅವಲೋಕಿಸಿ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಇಂಜಿನಿಯರ್ ರಾಘವೇಂದ್ರ ರಾವ್,ಪರ್ಯಾಯ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿನ್ತಯ,ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶೀಕೃಷ್ಣ ಸೇವಾ ಬಳಗದ ವೈ.ಎನ್.ರಾಮಚಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment