ಆನೆಗುಡ್ಡೆ ದೇವಸ್ಥಾನದ ಅರ್ಚಕ ಕುಟುಂಬದ ಹಿರಿಯ ಸದಸ್ಯ ಶ್ರೀನಿವಾಸ ಉಪಾಧ್ಯಾಯ ಇನ್ನಿಲ್ಲ
ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅರ್ಚಕ ಕುಟುಂಬದ ಹಿರಿಯ ಸದಸ್ಯ ಕುಂಭಾಸಿ ಶ್ರೀನಿವಾಸ ಉಪಾಧ್ಯಾಯ (90) ಅಸೌಖ್ಯದಿಂದಾಗಿ ಸೆ.30 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು , ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಾನದಲ್ಲಿ ಅತೀ ಹೆಚ್ಚು ಬಾರಿ ಮಹಾಪೂಜೆ ಮಾಡಿದ ಹೆಗ್ಗಳಿಕೆ ಪಾತ್ರರಾದ ಅವರು ಅತ್ಯಂತ ಸರಳ ಸಜ್ಜನಿಕೆಯ ಮೃದುಹೃದಯದವರಾಗಿದ್ದು ಎಲ್ಲರ ಪ್ರೀತಿಯ ಶೀನಣ್ಣ ಎಂದೇ ಜನಜನಿತರು. ಸಂಪ್ರದಾಯದಂತೆ ಆನೆಗುಡ್ಡೆ ಬ್ರಹ್ಮರಥೋತ್ಸವ ಮುನ್ನ ದಿನ ನಡೆಯುವ ಶ್ರೀದೇವರ ಕಟ್ಟೆಪೂಜೆಗೆ ಒಂದು ವಿಶೇಷ ಆಯಾಮವನ್ನು ಕಲ್ಪಿಸಿದ ಹೆಗ್ಗಳಿಕೆ ಇವರದ್ದು.
ಸಂತಾಪ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.