Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ ಸ೦ಪನ್ನದತ್ತ-ಸಪ್ತಾಹ ಮಹೋತ್ಸವಕ್ಕೆ ಕರಾವಳಿಕಿರಣ ಡಾಟ್ ಕಾ೦ ಬಳಗಕ್ಕೆ ಸಹಕಾರ ನೀಡಿದ ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಸಪ್ತಾಹ ಮಹೋತ್ಸವ ಸಮಿತಿ ಮತ್ತು ದೇವಸ್ಥಾನ ಸಿಬ್ಬ೦ಧಿವರ್ಗದವರಿಗೆ, ಅರ್ಚಕವೃ೦ದಕ್ಕೂ.ಸ್ವಯ೦ಸೇವಕ ಬಳಗಕ್ಕೆ,ಜಿ ಎಸ್ ಬಿ ಯುವಕ ಮ೦ಡಳಿಗೆ ಮತ್ತು ಜಾಹೀರಾತನ್ನು ನೀಡಿದ ಎಲ್ಲಾ ಜಾಹೀರಾತುದಾರರಿಗೆ ಸಮಾಜ ಬಾ೦ಧವರಿಗೆ ನಮ್ಮ ಧನ್ಯವಾದಗಳು ಮು೦ದೆಯು ದೇವಸ್ಥಾನದ ಎಲ್ಲಾ ಕಾರ್ಯಕ್ರಮಕ್ಕೆ ನಾವು ನಿಮ್ಮ ಸಹಕಾರವನ್ನು ಈ ಸ೦ದರ್ಭದಲ್ಲಿ ನಿರೀಕ್ಷಿಸುತ್ತೇವೆ.

ಕಸ್ತೂರಿ ಮಹಲ್‌ ಸೇರಿದ ಶಾನ್ವಿ-ರಚಿತಾ ರಾಮ್‌ ಜಾಗಕ್ಕೆ ಎಂಟ್ರಿ

ಹಿರಿಯ ನಿರ್ದೇಶಕ ದಿನೇಶ್‌ ಬಾಬು ನಿರ್ದೇಶನದ ಹೊಸಚಿತ್ರ “ಕಸ್ತೂರಿ ಮಹಲ್‌’ನಿಂದ ನಟಿ ರಚಿತಾ ರಾಮ್‌ ಇತ್ತೀಚೆಗಷ್ಟೇ ಹೊರ ನಡೆದಿದ್ದರು. ಸ್ವತಃ ಚಿತ್ರದ ನಿರ್ದೇಶಕ ದಿನೇಶ್‌ ಬಾಬು ಅವರೇ ಈ ಸುದ್ದಿಯನ್ನು ಖಚಿತಪಡಿಸಿದ್ದರು. ಇನ್ನೊಂದೆಡೆ “ಕಸ್ತೂರಿ ಮಹಲ್‌’ನಿಂದ ರಚಿತಾ ಹೊರನಡೆದಕೇವಲ ಒಂದೇ ವಾರದಲ್ಲಿ ಅವರ ಪಾತ್ರಕ್ಕೆ ಹೊಸ ನಾಯಕಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ. ಅಂದಹಾಗೆ, ಈ ಬಾರಿ “ಕಸ್ತೂರಿ ಮಹಲ್‌’ ಚಿತ್ರದಲ್ಲಿ ರಚಿತಾ ರಾಮ್‌ ಜಾಗಕ್ಕೆ ಎಂಟ್ರಿಯಾಗಿರುವ ನಾಯಕಿ ಶಾನ್ವಿ ಶ್ರೀವಾಸ್ತವ್‌.

ಹೌದು, ಶಾನ್ವಿ ಶ್ರೀವಾಸ್ತವ್‌ “ಕಸ್ತೂರಿ ಮಹಲ್‌’ ಚಿತ್ರಕ್ಕೆ ಹೊಸ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಚಿತ್ರತಂಡವೇ ಈ ಸುದ್ದಿಯನ್ನು ಬಹಿರಂಗಪಡಿಸಿದ್ದು, ಉಳಿದಂತೆ ಈ ಹಿಂದೆ ಚಿತ್ರದಲ್ಲಿದ್ದ ಕಲಾವಿದರು ಮತ್ತು ತಂತ್ರಜ್ಞರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವರು “ಕಸ್ತೂರಿ ಮಹಲ್‌’ ಚಿತ್ರದಲ್ಲಿ ಮುಂದುವರೆಯಲಿದ್ದಾರೆ ಎಂದಿದ್ದಾರೆ ನಿರ್ದೇಶಕ ದಿನೇಶ್‌ ಬಾಬು.

ಇನ್ನು “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ನಟಿ ಶಾನ್ವಿ ಶ್ರೀವಾಸ್ತವ್‌ “ಕಸ್ತೂರಿ ಮಹಲ್‌’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಕಸ್ತೂರಿ ಮಹಲ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವುದರ ಬಗ್ಗೆ ಮಾತನಾಡಿರುವ ಶಾನ್ವಿ, “ಹಿರಿಯ ನಿರ್ದೇಶಕ ದಿನೇಶ್‌ ಬಾಬು ಸರ್‌ ಅವರೊಂದಿಗೆ ಕೆಲಸ ಮಾಡಲು ನನಗೆ ಸಂತೋಷವಾಗುತ್ತದೆ. ನಾನು ಮೊದಲು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಹಾರರ್‌ ಸಿನಿಮಾದ ಮೂಲಕ. ಆನಂತರ ಬೇರೆ ಬೇರೆ ಜಾನರ್‌ ಸಿನಿಮಾಗಳಲ್ಲಿ ಬೇರೆ ಬೇರೆ ಥರದ ಪಾತ್ರಗಳು ಸಿಕ್ಕಿದ್ದವು. ಈಗ ಮತ್ತೂಮ್ಮೆ ಅಂಥದ್ದೇ ಸಿನಿಮಾ ಸಿಕ್ಕಿದೆ. ಈ ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಗುವುದೆಂಬ ಭರವಸೆಯಿದೆ’ ಎಂದಿದ್ದಾರೆ.

ಇನ್ನು,ಕನ್ನಡದಲ್ಲೇ ಟ್ವೀಟ್‌ ಮಾಡಿರುವ ಶಾನ್ವಿ ಬಗ್ಗೆ ನೆಟ್ಟಿಗರಿಂದ ಪ್ರಶಂಸೆ ಬರುತ್ತಿದೆ. ಅದೆಷ್ಟೋಕನ್ನಡದ ನಾಯಕಿಯರುಕನ್ನಡ ಮಾತನಾಡಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಶಾನ್ವಿ ಖುಷಿಯಿಂದ ಕನ್ನಡದಲ್ಲೇ ಟ್ವೀಟ್‌ ಮಾಡುತ್ತಿದ್ದಾರೆ.

“ಕಸ್ತೂರಿ ಮಹಲ್‌’ ದಿನೇಶ್‌ ಬಾಬು ನಿರ್ದೇಶನದ50 ಚಿತ್ರವಾಗಿದ್ದು, ಚಿತ್ರದಲ್ಲಿ ಸ್ಕಂದ ಅಶೋಕ್‌, ಶ್ರುತಿ ಪ್ರಕಾಶ್‌, ರಂಗಾಯಣ ರಘು, ನಾರಾಯಣ ಸ್ವಾಮಿ,ಕಾಶಿಮಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಶ್ರೀಭವಾನಿ ಆರ್ಟ್ಸ್’ ಹಾಗೂ “ರುಬಿನ್‌ ರಾಜ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಪಿಕೆಹೆಚ್‌ ದಾಸ್‌ ಛಾಯಾಗ್ರಹಣ, ಸೌಂದರ್‌ ರಾಜ್‌ ಸಂಕಲನವಿದೆ. ಇದೇ ಅಕ್ಟೋಬರ್‌5ರಿಂದ ಚಿತ್ರದ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿಕ್ಕಮಗಳೂರು ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.

No Comments

Leave A Comment