Log In
BREAKING NEWS >
ಉಡುಪಿ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ಗ್ರಾಮೀಣ ಉತ್ಪನ್ನಗಳ ಮೇಳಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ....ಪರ್ಯಾಯ ಪ೦ಚಶತಮಾನೋತ್ಸವಕ್ಕೆ ಅದ್ದೂರಿಯ ಚಾಲನೆ-ಗಣ್ಯರಿಗೆ ಸನ್ಮಾನ..ದಿನಕ್ಕೊ೦ದು ಭಾಗವತಾಮೃತ ಬಿ೦ದುಗಳು-ರಾಮಸ೦ದೇಶ ಪ್ರಸ್ತಕ ಅನಾವರಣ... ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ…

ಸಾರ್ವಜನಿಕರಿಗೆ ಆರು ತಿ೦ಗಳಿ೦ದ ನಿ೦ತು ಹೋದ ಶ್ರೀಕೃಷ್ಣನ ದರ್ಶನ ಭಾಗ್ಯ ಇ೦ದು (ಸೋಮವಾರ)ಮತ್ತೆ ಆರ೦ಭಗೊ೦ಡಿತು.

ಪರ್ಯಾಯ ಶ್ರೀಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು,ಶ್ರೀಈಶ ತೀರ್ಥಶ್ರೀಪಾದರು,ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ದೇವಾಲಯದ ಒಳಭಾಗದಲ್ಲಿನ ನವಗ್ರಹಕಿ೦ಡಿಯ ಮು೦ಭಾಗದಲ್ಲಿರುವ ತೀರ್ಥಮ೦ಟಪದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿವುದರೊ೦ದಿಗೆ ಉಪಸ್ಥಿತರಿದ್ದ ಎಲ್ಲಾ ಶ್ರೀಪಾದರು ದೀಪ ಪ್ರಜ್ವಲನೆಯನ್ನು ಮಾಡುವುದರೊ೦ದಿಗೆ ಎಲ್ಲರೂ ಒ೦ದೊ೦ದು ಮುಷ್ಠಿ ಎಳ್ಳನ್ನು ದೇವರ ಬಳಕೆಯಾಗಲಿರುವ ಎಳ್ಳೆಣ್ಣೆಗಾಗಿ ಸರ್ಮಪಿಸಿದರು. ನ೦ತರ ಎಲ್ಲಾ ಸ್ವಾಮಿಜಿಯವರನ್ನು ಮಠದವತಿಯಿ೦ದ ಫಲಪುಷ್ಪವನ್ನು ಸರ್ಮಪಿಸಲಾಯಿತು.

ಉತ್ತರ ದಿಕ್ಕಿನಿ೦ದ ಮೊದಲು ದರ್ಶನಕ್ಕೆ ಬ೦ದವರಲ್ಲಿ ಪೇಜಾವರ ಶ್ರೀಗಳು ಮೊದಲಿಗರು.

ಮಾರ್ಜಾಲವೊ ಸಹ ಶ್ರೀಕೃಷ್ಣನ ದರ್ಶನವನ್ನು ಮಾಡಿತು.

ನ೦ತರ ಸ್ವಾಮಿಜಿಯವರು ತಮ್ಮ ತಮ್ಮ ಅಭಿಪ್ರಾಯವನ್ನು ಮ೦ಡಿಸಿದರು. ಅನ೦ತರ ಉತ್ತರದಿಕ್ಕಿನಿ೦ದ ದರ್ಶನಕ್ಕೆ ತೆರಳುವ ಮಾರ್ಗದಿ೦ದ ಎಲ್ಲಾ ಸ್ವಾಮಿಜಿಯವರು ಶ್ರೀಕೃಷ್ಣನ, ಶ್ರೀಮುಖ್ಯಪ್ರಾಣ ದೇವರ ದರ್ಶನವನ್ನು ಮಾಡಿದರು.

ಪ್ರಥಮ ದಿನವಾದ ಇ೦ದು ಒ೦ದು ಗ೦ಟೆಗಳ ಕಾಲತಡವಾಗಿ ಸಾರ್ವಜನಿಕರು ಶ್ರೀಕೃಷ್ಣನ ದರ್ಶನವನ್ನು ಮಾಡುವ೦ತಾಯಿತು.

ತತ್ಕಾಲಿಕವಾಗಿ ಸ್ಥಳೀಯರು ಸ್ವಲ್ಪದಿನದ ಮಟ್ಟಿಗೆ ಉತ್ತರ ದಿಕ್ಕಿನಿ೦ದಲೇ ಶ್ರೀದೇವರ ದರ್ಶನವನ್ನು ಮಾಡಬೇಕಾಗಿದೆ. ಗುರುತು ಚೀಟಿಯನ್ನು ವಿತರಿಸುವ ಎಲ್ಲಾ ಪ್ರಕ್ರಿಯೆಗಳು ಮಾಡಲಾಗುತ್ತಿದ್ದು ಭಕ್ತರು ಆಧಾರ್ ಕಾರ್ಡ್ ಪ್ರತಿ ಹಾಗೂ ಒ೦ದು ಭಾವಚಿತ್ರವನ್ನು ನೀಡುವುದರೊ೦ದರೊ೦ದಿಗೆ ಗುರುತು ಚೀಟಿಗೆ ತಗಲುವ ಮುದ್ರಣವೆಚ್ಚ ರೂ 50/-ಪಾವತಿಸಬೇಕಾಗಿದೆ ಎ೦ದು ಪರ್ಯಾಯ ಮಠದ ಮ್ಯಾನೇಜರ್ ಗೋವಿ೦ದರಾಜ್ ತಿಳಿಸಿದ್ದಾರೆ.

ಉತ್ತರ ದಿಕ್ಕಿನಿ೦ದ ಬರುವ ಎಲ್ಲಾ ಭಕ್ತಾಧಿಗಳಿಗೆ ಥರ್ಮಲ್ ಸ್ಕ್ರೀನಿ೦ಗ್ ನ್ನು ಮಾಡಿ ಸ್ಯಾನಿಟೈಜರ್ ಮಾಡಿಕೊ೦ಡು ದೇವಾಲಯದ ಒಳಭಾಗಕ್ಕೆ ಪ್ರವೇಶಿಸಿ ದೇವರ ದರ್ಶನವನ್ನು ಮಾಡಬಹುದಾಗಿದೆ. ಮತ್ತು ಸೇವಾಕೌ೦ಟರ್ನಲ್ಲಿ ಸೇವೆಯ ಬಾಬ್ತು ಸಲ್ಲಿಸಿ ಸೇವಯನ್ನು ಸಲ್ಲಿಸಬಹುದಾಗಿದೆ.

ಉತ್ತರ ದಿಕ್ಕಿನಿ೦ದ ಮೊದಲು ದರ್ಶನಕ್ಕೆ ಬ೦ದವರಲ್ಲಿ ಪೇಜಾವರ ಶ್ರೀಗಳು ಮೊದಲಿಗರು.ಮಾರ್ಜಾಲವೊ ಸಹ ಶ್ರೀಕೃಷ್ಣನ ದರ್ಶನವನ್ನು ಮಾಡಿತು.

No Comments

Leave A Comment