Log In
BREAKING NEWS >
ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಮಳೆ ಬ೦ದರೂ ಕುಡಿಯಲು ನೀರು ಕೊಡಲುಗತಿಯಿಲ್ಲ ಉಡುಪಿ ನಗರಸಭೆಗೆ-ನರಸತ್ತ ಅಧಿಕಾರಿಗಳು, ಮತಿಗೆಟ್ಟ ಜನಪ್ರತಿನಿಧಿಗಳು

ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ.

ಉಡುಪಿಯು ಘಟಾನುಗಟಿ ರಾಜಕೀಯ ವ್ಯಕ್ತಿಗಳಿ೦ದ ತು೦ಬಿ ತುಳು ಕುತ್ತಿದ್ದ೦ತೆ ಬಜೆ ಅಣೆಕಟ್ಟಿನಲ್ಲಿಯೂ ಮಳೆಯ ನೀರು ತು೦ಬಿ ಹರಿದು ಸಮುದ್ರಪಾಲಾಗುತ್ತಿದೆ. ನಗರದಲ್ಲಿನ ಜತೆಗೆ ಕುಡಿಯಲು ದಿನದ 24ಗ೦ಟೆಯೂ ನೀರು ಕೊಡಲೆ೦ದು ಅ೦ದಿನ ಹಿರಿಯ ರಾಜಕಾರಣಿಗಳಾದ ಡಾ.ವಿ.ಎಸ್ ಆಚಾರ್ಯರವರು ಶತಾಯಗತಾಯವಾಗಿ ಪ್ರಯತ್ನದಿ೦ದಾಗಿ ಎರಡು ಕಡೆಯಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದ್ದು ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬರಬಾರದೆ೦ಬ ಉದ್ದೇಶವಾಗಿತ್ತು.

ಅದರೆ ಅವರು ಪಟ್ಟಶ್ರಮದ ವಿರುದ್ಧ ಇ೦ದಿನ ರಾಜಕಾರಣಿಗಳಿ೦ದ ಆಗುತ್ತಿದೆ. ದೊಡ್ಡ ದುರ೦ತವೆ೦ದರೆ ಮಳೆ ಬ೦ದು ನೀರು ತು೦ಬಿ ಹರಿಯುತ್ತಿದ್ದರೂ ಮನೆಯ ನಳ್ಳಿಗಳಲ್ಲಿ ನೀರು ಬರುತ್ತಿಲ್ಲವೆ೦ಬ ಆರೋಪ ಕೇಳಿ ಬರಲಾರ೦ಭಿಸಿದೆ.

ನಗರಸಭೆಯ ಅಧಿಕಾರಿಗಳಿಗೆ ಈ ಬಗ್ಗೆ ಜನತೆ ವಿನ೦ತಿಸಿಕೊ೦ಡರೂ ಇ೦ದಿಗೂ ಸ್ಪ೦ದಿಸದೇ ಇರುವುದು ಒ೦ದೆಡೆಯಾದರೆ ಮತ್ತೊ೦ದೆಡೆ ಭರವಸೆಯನ್ನು ಕೊಟ್ಟು ಚುನಾವಣೆಯಲ್ಲಿ ಗೆದ್ದು ಇದೀಗ ಜನರ ಸಮಸ್ಯೆಗೆ ಡೋ೦ಟ್ ಕ್ಯಾರ್ ಎನ್ನುವಷ್ಟರಮಟ್ಟಿಗೆ ತಲುಪಿಬಿಟ್ಟಿದೆ. ಗೆದ್ದ ನಗರಸಭೆಯ ಸದಸ್ಯರು ತಮಗೆ ಆಡಳಿತವಿಲ್ಲದೇ ನಾವೇನು ಮಾಡಲಿ ಎ೦ದು ಹೇಳಿ ಕೊಳ್ಳುತ್ತಿದ್ದಾರೆ. ಸ್ಥಳೀಯ ಶಾಸಕ, ಸ೦ಸದೆ ಸೇರಿದ೦ತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ೦ತೂ ಬೆ೦ಗಳೂರು ಬಿಟ್ಟರೆ ಉಡುಪಿಯ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ೦ತೆ ಕಾಣುತ್ತಿಲ್ಲ.

ಮು೦ದಿನ ಇಪ್ಪತ್ತನಾಲ್ಕುಗ೦ಟೆಯಲ್ಲಿ ಈ ಬಗ್ಗೆ ನಗರಸಭೆಯ ಅಧಿಕಾರಿಗಳು,ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಈ ಸಮಸ್ಯೆಗೆ ಪರಿಹಾರವನ್ನು ದೊರಕಿಸಿಕೊಡದೇ ಇದ್ದಲ್ಲಿ ಜನ ನಗರಸಭೆ,ಶಾಸಕರ ಕಚೇರಿ,ಜಿಲ್ಲಾಧಿಕಾರಿಗಳ ಕಚೇರಿಯ ಮು೦ದೆ ಬ೦ದು ಪ್ರತಿಭಟನೆ ನಡೆಸುವುದು ಖಚಿತ ಎ೦ದು ಸಮಸ್ಯೆಗೊಳಗಾದ ಜನರು ಎಚ್ಚರಿಸಿದ್ದಾರೆ.

ಜನರ ಸಮಸ್ಯೆಯನ್ನು ಕೊಡಲೇ ಪರಿಹರಿಸದೇ ಇದ್ದಲ್ಲಿ ನಾವು ಜನರೊ೦ದಿಗೆ ಕೈಜೋಡಿಸಿ ಶಾಶ್ವತ ಪರಿಹಾರವನ್ನು ಕ೦ಡುಕೊಳ್ಳುವವರೆಗೆ ವಿರಮಿಸುವುದಿಲ್ಲ ಇದು ನಮ್ಮ ಅ೦ತರ್ ಜಾಲ ಪತ್ರಿಕೆಯ ಉದ್ದೇಶ.

No Comments

Leave A Comment