Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಲ್ಯಾಂಡಿಂಗ್ ವೇಳೆ ಸೇನಾ ವಿಮಾನ ಪತನ: 22 ಮಂದಿ ದುರ್ಮರಣ ನಾಲ್ವರು ನಾಪತ್ತೆ

ಕೇವ್ : ಸೇನಾ ವಿಮಾನವೊಂದು ಲ್ಯಾಂಡಿಂಗ್‌ ನಡೆಸುವ ವೇಳೆ ಪತನವಾದ ಕಾರಣ ತರಬೇತಿ ಪಡೆದ ವಾಯುಸೇನೆಯ ಕನಿಷ್ಠ 22 ಯುವ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಉಕ್ರೇನ್‌ನ ಖಾರ್ಕಿವ್‌ ಬಳಿ ನಡೆದಿದೆ.

ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ.

ಆಂಟೊನೊವ್ -26 ಎಂಬ ಹೆಸರಿನ ಸೇನಾ ವಿಮಾನ ಇದಾಗಿದ್ದು ಪತನದ ತೀವ್ರತೆ ಭಾರೀ ಬೆಂಕಿ ಸಂಭವಿಸಿದ್ದು, 22 ಮಂದಿ ಸಜೀವ ದಹನರಾಗಿದ್ದಾರೆ ಎಂದು ಅಲ್ಲಿನ ಸರಕಾರ ಮಾಹಿತಿ ನೀಡಿದೆ. ಇನ್ನು ಈ ವಿಮಾನದಲ್ಲಿ ಒಟ್ಟು 27 ಮಂದಿಯಿದ್ದು ಈ ಪೈಕಿ 22 ಮಂದಿ ಸಾವನಪ್ಪಿದ್ದಾರೆ. ನಾಲ್ಕು ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇಬ್ಬರಿಗೆ ಗಂಭಿರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಮೂರು ಮಂದಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ತುರ್ತು ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

No Comments

Leave A Comment