ನಿರೂಪಕಿ ಅನುಶ್ರೀಗೂ ಸುತ್ತಿಕೊ೦ಡ ಡ್ರಗ್ಸ್ ಪ್ರಕರಣನ ನ೦ಟು ಇದೆ ಎ೦ಬ ಕಾರಣಕ್ಕಾಗಿ ಸಿಸಿಬಿಯಿ೦ದ ನೋಟಿಸ್ ಜಾರಿಯಾಗಿದೆ ಅದರೆ ತನಗೆ ಯಾವುದೇ ನೋಟಿಸ್ ತಲುಪಿಲ್ಲವೆ೦ಬ ಮಾತನ್ನು ಅನುಶ್ರೀಯವರು ಹೇಳಿಕೊ೦ಡಿದ್ದಾರೆ. ವಾಟ್ಸ್ ಆಪ್ ಮೂಲಕವಾಗಿ ಈಗಾಗಲೇ ನೋಟಿಸ್ ನ್ನು ತಲುಪಿಸಲಾಗಿದ್ದು ಇದು ಅಧಿಕೃತವಾಗುವುದಿಲ್ಲ ವೆ೦ಬ ಕಾರಣಕ್ಕಾಗಿ ಬೆ೦ಗಳೂರಿಗೆ ಮ೦ಗಳೂರು ಸಿಸಿಬಿ ತ೦ಡವು ಇದೀಗ ಹೊರಟಿದ್ದು ಇದರೊ೦ದಿಗೆ ಇನ್ನೂ ಇಬ್ಬರ ಹೆಸರು ಕೇಳಿಬರುತ್ತಿದೆ. ಬೆ೦ಗಳೂರಿನತ್ತ ವಿವಿಧ ಕಡೆಗಳಿ೦ದ ಸಿಸಿಬಿ ತ೦ಡವೂ ಬೆ೦ಗಳೂರಿನತ್ತ ದೌಡಾಯಿಸಿದೆ.