ಅಕ್ರಮ ದನಗಳ ಸಾಗಾಟ : ಮೂವರು ಆರೋಪಿಗಳು ಮತ್ತು ಟೆಂಪೋ ವಶ..!
ಹಿಂದೂ ಜಾಗರಣ ವೇದಿಕೆ ಮತ್ತು ಶಿರ್ವ ಪೋಲಿಸರ ಮಿಂಚಿನ ಕಾರ್ಯಚರಣೆ : ಅಕ್ರಮ ದನ ಸಾಗಾಟದ ಆರೋಪಿಗಳು ಮತ್ತು ಟೆಂಪೋ ವಶ…
ಶಿರ್ವ : ಉಡುಪಿ ಜಿಲ್ಲೆಯ ಶಿರ್ವ ಸಮೀಪ ಅಕ್ರಮವಾಗಿ ಟಾಟಾ ಎಸ್ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದ ವೇಳೆ ಶಿರ್ವ ಪೋಲಿಸರು ದಾಳಿ ಮಾಡಿ ಆರೋಪಿಗಳ ಸಹಿತ ದನಗಳನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶಿರ್ವ ಪೋಲಿಸರು ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಶಿರ್ವ ಮುಟ್ಲುಪಾಡಿ ಸೇತುವೆಯ ಬಳಿ ವಾಹನ ತಪಾಸಣೆ ಮಾಡಿದಾಗ ಅಕ್ರಮ ದನ ಸಾಗಾಟ ಕಂಡು ಬಂದಿದೆ.ಚಾಲಕ ಸಹಿತ ಒಟ್ಟು ಮೂವರು ಆರೋಪಿಗಳು ಮತ್ತು ಮೂರು ದನಗಳು ಹಾಗೂ ಟಾಟಾ ಎಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರ್ವ ಠಾಣೆಯಲ್ಲಿ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಪೋಲಿಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.