Log In
BREAKING NEWS >
ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿ ರಾಜ್ಯದಲ್ಲಿ ಹಲವೆಡೆ ಇನ್ನೆರಡು ದಿನ ಮಳೆ

ಬಾಲಿವುಡ್ ಟಾಪ್ ನಟಿಯರಾದ ದೀಪಿಕಾ, ಸಾರಾ, ರಕುಲ್, ಮತ್ತು ಶ್ರದ್ಧಾಗೆ ಎನ್‌ಸಿಬಿ ಸಮನ್ಸ್!

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯರಾಗಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಗೆ ಎನ್‌ಸಿಬಿ ಸಮನ್ಸ್ ನೀಡಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ನಟಿಯರಿಗೆ ಎನ್‌ಸಿಬಿ ಸಮನ್ಸ್ ನೀಡಿದೆ ಎನ್ನಲಾಗಿದೆ. ಇನ್ನು ಸೆಪ್ಟೆಂಬರ್ 24ಕ್ಕೆ ಫ್ಯಾಶನ್ ಡಿಸೈನರ್ ಸಿಮೋನ್ ಖಂಬಟ್ಟಾ, ನಟಿ ರಕುಲ್ ಪ್ರೀತ್ ಸಿಂಗ್, ಸೆ. 25ರಂದು ದೀಪಿಕಾ ಪಡುಕೋಣೆ, ಹಾಗೂ ಸೆ. 26ಕ್ಕೆ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಡ್ರಗ್ಸ್ ಖರೀದಿಗಾಗಿ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿ ಎರಡು ದಿನಗಳ ಹಿಂದೆ ಖಾಗಸಿ ವಾಹಿನಿಗಳಲ್ಲಿ ಬಿತ್ತರವಾಗಿತ್ತು.

ಕಳೆದ ಜೂನ್ 14ರಂದು ಸುಶಾಂತ್ ಸಿಂಗ್ ಮೃತದೇಹ ಬಾಂದ್ರಾದ ಫ್ಲಾಟ್ ನಲ್ಲಿ ಪತ್ತೆಯಾಗಿತ್ತು. ಈ ಬಳಿಕ ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಡ್ರಗ್ಸ್ ವಿಚಾರ ತಣುಕು ಹಾಕಿಕೊಂಡಿದ್ದರಿಂದ ಎನ್‌ಸಿಬಿ ಅಖಾಡಕ್ಕೆ ಇಳಿದಿತ್ತು.

No Comments

Leave A Comment