Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಮದುವೆಯಾದ ಹೊಸತರಲ್ಲೇ ಪತಿಯ ವಿರುದ್ಧ ದೂರು ನೀಡಿದ ಪೂನಂ ಪಾಂಡೆ ! ಪೊಲೀಸರಿಂದ ಸ್ಯಾಮ್ ಬಂಧನ

ಗೋವಾ : ಮದುವೆಯಾದ ಕೆಲವೇ ದಿನಗಳಲ್ಲಿ ನಟಿ ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ಕಿರುಕುಳ ಹಾಗೂ ಜೀವ ಬೆದರಿಕೆಯ ಆರೋಪದ ಮೇಲೆ ಪತಿ ಸ್ಯಾಮ್ ಬಾಂಬೆ ಅವರನ್ನು ದಕ್ಷಿಣ ಗೋವಾದ ಕಾನಕೋನ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದ ನಟಿ ಪೂನಂ ಪಾಂಡೆ ತನ್ನ ಪತಿಯ ವಿರುದ್ಧವೇ ದಕ್ಷಿಣ ಗೋವಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ಜೋಡಿ ಸೆಪ್ಟೆಂಬರ್ 1ರಂದು ಮದುವೆಯಾಗಿದ್ದರು ಆದರೆ ಮದುವೆಯಾದ ಹೊಸದರಲ್ಲಿ ಗೋವಾಕ್ಕೆ ಬಂದಿದ್ದ ಜೋಡಿ ಇಲ್ಲಿ ಪತಿ ಸ್ಯಾಮ್ ನಟಿ ಪೂನಂ ಪಾಂಡೆಗೆ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಪೂನಂ ಪಾಂಡೆ ಸೋಮವಾರ ರಾತ್ರಿ ದಕ್ಷಿಣ ಗೋವಾದ ಕಾನಕೋನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಈ ಕುರಿತು ಇಲ್ಲಿನ ಪೊಲೀಸ್ ಅಧಿಕಾರಿ ತುಕಾರಾಮ್ ಚವಾಣ್ ಪೂನಂ ಪಾಂಡೆ ನಮ್ಮ ಠಾಣೆಯಲ್ಲಿ ಪತಿ ಸ್ಯಾಮ್ ನನಗೆ ಕಿರುಕುಳ ನೀಡುತ್ತಿದ್ದಾರೆ ಜೊತೆಗೆ ನನ್ನ ಜೀವಕ್ಕೆ ಅಪಾಯವಿದೆ ಇದೆ ಎಂದು ದೂರು ನೀಡಿದ್ದು ಇದರ ಪರಿಣಾಮ ಮಂಗಳವಾರ ಸ್ಯಾಮ್ ಬಾಂಬೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

No Comments

Leave A Comment