Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

“ ಮಾಲು ಬೇಕು ಪ್ಲೀಸ್” ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

ಮುಂಬೈ: ಸೆಲೆಬ್ರೆಟಿಗಳ ಡ್ರಗ್ ನಂಟು ಅಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಡ್ರಗ್ ಜಾಲದಲ್ಲಿ ಒಂದೊಂದೇ ಚಿತ್ರನಟ- ನಟಿಯರ ಹೆಸರು ಹೊರಬರುತ್ತಿದೆ. ಇದೀಗ ಬಾಲಿವುಡ್ ನ ಪ್ರಸಿದ್ದ ನಟಿ ದೀಪಿಕಾ ಪಡುಕೋಣೆ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.

ಇದೀಗ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಗೆ ಎನ್ ಸಿಬಿ ನೋಟಿಸ್ ನೀಡಲಾಗಿದೆ. ದೀಪಿಕಾಗೆ ಮಾದಕ ವಸ್ತುಗಳನ್ನು ಮ್ಯಾನೇಜರ್ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.

ಇದೀಗ ದೀಪಿಕಾ ಪಡುಕೋಣೆ ಮತ್ತು ಕರೀಶ್ಮಾ ಪ್ರಕಾಶ್ ನಡುವಿನ ವ್ಯಾಟ್ಸಪ್ ಸಂಭಾಷಣೆಯೊಂದು ಈಗ ಬಯಲಾಗಿದೆ. ಜೀ ನ್ಯೂಸ್ ಈ ಬಗ್ಗೆ ವರದಿ ಮಾಡಿದ್ದು, ಈ ಸಂಭಾಷಣೆ 2017ರ ಅಕ್ಟೋಬರ್ 28ಕ್ಕೆ ನಡೆದಿದೆ ಎನ್ನಲಾಗಿದೆ. ಈ ಸಂಭಾಷಣೆ ಈ ಕೆಳಗಿನಂತಿದೆ.

ಡಿ: ಕೆ.. ಮಾಲ್ ಇದೆಯಾ?

ಕೆ: ಇದೆ. ಆದರೆ ನಾನು ಬಾಂದ್ರಾದ ಮನೆಯಲ್ಲಿದ್ದೇನೆ.. ಆದರೆ ನಿಮಗೆ ಬೇಕಾದರೆ ಅಮಿತ್ ಬಳಿ ಕೇಳುತ್ತೇನೆ.

ಡಿ: ಹೌದು.. ಪ್ಲೀಸ್….

ಕೆ: ಅಮಿತ್ ಬಳಿಯಿದೆ. ಅವನು ತರುತ್ತಾನೆ.

ಡಿ: ಹ್ಯಾಶ್ ಆ? ವೀಡ್ ಬೇಡ

ಕೆ: ಕೊಕೊ ಬಳಿ ಯವಾಗ ಬರುತ್ತೀರಾ?

ಡಿ: 11.30/12

ಡಿ: ಅಲ್ಲಿ ಯಾವ ಸಮಯದವರೆಗೆ ಇರುತ್ತದೆ?

ಕೆ: ಅವಳು 11: 30 ಕ್ಕೆ ಹೇಳಿದಳು, ಏಕೆಂದರೆ ಅವಳು 12 ಕ್ಕೆ ಬೇರೆ ಸ್ಥಳದಲ್ಲಿರಬೇಕು.

ಮುಂಬೈನ ಕಮಲಾ ಮಿಲ್ಗ್ ಬಳಿಯಿರುವ ಕೊಕೊ ಹೋಟೆಲ್ ಬರಲು ಈ ಸಂಭಾಷಣೆಯಲ್ಲಿ ತಿಳಿಸಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ರಿಯಾ ಚಕ್ರಚರ್ತಿ, ಶೋವಿಕ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಅದಲ್ಲದೆ ನಟಿಯರಾದ ಸಾರಾ ಅಲಿ ಖಾನ್, ಶ್ರದ್ದಾ ಕಪೂರ್ ಹೆಸರು ಕೂಡಾ ಕೇಳಿಬಂದಿದೆ.

No Comments

Leave A Comment