Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಡ್ರಗ್ ಮಾಫಿಯಾ : ರಾಗಿಣಿ, ಸಂಜನಾ ಜಾಮೀನು ಅರ್ಜಿ ಸೆ. 24ಕ್ಕೆ ಮುಂದೂಡಿಕೆ

ಬೆಂಗಳೂರು ; ಡ್ರಗ್ ಮಾಫಿಯಾ ಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಅರ್ಜಿ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಸಂದರ್ಭ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಆದುದರಿಂದ ರಾಗಿಣಿ ಹಾಗೂ ಸಂಜನಾಗೆ ಮತ್ತೆ ಮೂರುದಿನ ಕಾಲ ಪರಪ್ಪನ ಅಗ್ರಹಾರದಲ್ಲೇ ಕಳೆಯುವಂತಾಗಿದೆ.

ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶವನ್ನು ಕೇಳಿದ್ದು ಇದಕ್ಕೆ ಸಮ್ಮತಿಸಿದ ಕೋರ್ಟ್ ಸಂಜನಾ ಅರ್ಜಿ ವಿಚಾರಣೆಯನ್ನು ಮೂರು ದಿನಗಳ ಕಾಲ ಮುಂದೂಡಿತು.

ಅಂತೆಯೇ ರಾಗಿಣಿ ಪರ ವಾದ ಮಾಡಿದ ವಕೀಲ ರಾಗಿಣಿ ಮನೆಯಲ್ಲಿ ಯಾವುದೇ ಮಾದಕ ವಸ್ತುಗಳು ದೊರಕಲಿಲ್ಲ, ಅಂತೆಯೇ ರಾಗಿಣಿ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು ಇದರಲ್ಲೂ ಯಾವುದೇ ಸಾಕ್ಷಿಗಳು ಅಧಿಕಾರಿಗಳಿಗೆ ದೊರೆಯಲಿಲ್ಲ ಹಾಗಾಗಿ ಇದು ಒಂದು ಸಂಚು ಎಂದು ರಾಗಿಣಿ ಪರ ವಕೀಲರು ವದ ಮಾಡಿದ್ದಾರೆ.

ಆದರೆ ಸಿಸಿಬಿ ಅಧಿಕಾರಿಗಳ ಹೇಳಿಕೆಯಂತೆ ನಟಿ ರಾಗಿಣಿಗೆ ಶ್ರೀಮಂತ ವ್ಯಕ್ತಿಗಳ ಪರಿಚವಿದ್ದು ಕೆಲವೊಂದು ಸಾಕ್ಷಿಗಳು ನಮ್ಮ ಬಳಿ ಇದೆ ಹಾಗಾಗಿ ಕೋರ್ಟ್ ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶಪಡಿಸುವ ಸಂಭವ ಹೆಚ್ಚಿದೆ ಹಾಗಾಗಿ ರಾಗಿಣಿಗೆ ಜಾಮೀನು ನೀಡಬಾರದು ಎಂದು ಹೇಳಿತ್ತು ಇದನ್ನು ಅವಲೋಕಿಸಿದ ಕೋರ್ಟ್ ರಾಗಿಣಿ ವಿಚಾರಣೆಯನ್ನೂ ಮೂರು ದಿನಗಳ ಕಾಲ ಮುಂದೂಡಿದೆ.

No Comments

Leave A Comment