Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ನೆರೆ ಸ೦ತ್ರಸ್ತ 80 ಕುಟುಂಬಗಳಿಗೆ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಅದಮಾರು ಮಠಾಧೀಶರಿ೦ದ ಅನ್ನಪ್ರಸಾದ ವಿತರಣೆ

ಶ್ರೀಕೃಷ್ಣಮಠದ ಆಸುಪಾಸಿನ ಸುಮಾರು 80 ಕುಟುಂಬಗಳ 400 ಜನ ರಿಗೆ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಆಶಯದಂತೆ ಶ್ರೀಕೃಷ್ಣ ಮಠದಿಂದ ಅನ್ನಪ್ರಸಾದ ವಿತರಿಸಲಾಯಿತು.

ಪ್ರಸಾದ ರೂಪದಲ್ಲಿ ಅನ್ನ, ಸಾರು, ಕುಂಬಳಕಾಯಿ ಸಾಂಬಾರು ಮತ್ತು ಪಾಯಸ ವಿತರಿಸಲಾಯಿತು. ವಿತರಣಾ ಸಂದರ್ಭದಲ್ಲಿ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮತ್ತು ಉಡುಪಿ ಶಾಸಕ ಕೆ ರಘುಪತಿ ಭಟ್ ಮತ್ತು ನಗರಸಭಾ ಆಯುಕ್ತರು ಕಂದಾಯ ಸಹಾಯಕ ಆಯುಕ್ತರು ಪೊಲೀಸ್ ವರಿಷ್ಠಾಧಿಕಾರಿಗಳು ನಗರಸಭಾ ಸದಸ್ಯರು ಮತ್ತು ನೇತೃತ್ವ ವಹಿಸಿದ ಸ್ಥಳೀಯರಾದ ಹರೀಶ್ ಬೈಲಕೆರೆ ಶ್ರೀಮಠದ ವ್ಯವಸ್ಥಾಪಕರಾದ ಗೋವಿ೦ದ ರಾಜ್ ಮುತ್ತು ಶ್ರೀ ಕೃಷ್ಣ ಸೇವಾ ಬಳಗದ ವೈ ಎನ್ ಆರ್ ರಾವ್ ಮುಂತಾದವರು ಉಪಸ್ಥಿತರಿದ್ದರು.

ಇದೇ ಸ೦ದರ್ಭದಲ್ಲಿ ಪ್ರವಾಸಕ್ಕೆ ಬ೦ದ ಹೊರಊರಿನ ಭಕ್ತಾಧಿಗಳಿಗೆ ಮಧ್ಯಾಹ್ನದ ಅನ್ನ ಪ್ರಸಾದವನ್ನು ವಿತರಿಸಲಾಯಿತು.

ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಸಮಾಜದ ಒಳಿತಿಗಾಗಿ ನಿನ್ನೆ ಸಂಜೆ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಶ್ರೀಪಾದರು ರಾತ್ರಿ ಪೂಜೆಯ ನಂತರ ಶ್ರೀಮಠದ (ಪುರೋಹಿತ ವರ್ಗದವರು) ಋತ್ವಿಜರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು

No Comments

Leave A Comment