Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಕೇರಳದ ಕ್ವಾರಿಯಲ್ಲಿ ಸ್ಫೋಟ, ಕರ್ನಾಟಕ, ತಮಿಳುನಾಡಿನ ಇಬ್ಬರು ವಲಸೆ ಕಾರ್ಮಿಕರ ಸಾವು

ಎರ್ನಾಕುಲಂ: ಕೇರಳದ ಕ್ವಾರಿಯೊಂದರಲ್ಲಿ ಸಂಭವಿಸಿದ ಸ್ಟೋಟದಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿರುವ ಕ್ವಾರಿಯಲ್ಲಿ ಈ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಲ್ಲು ಸ್ಫೋಟಕ್ಕೆ ಬಳಸುವ ಉದ್ದೇಶದಿಂದ ಇಲ್ಲಿನ ಕಟ್ಟಡದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಡಲಾಗಿತ್ತು. ಆದರೆ ಈ ಸ್ಫೋಟಕಗಳು ಇಂದು ಮುಂಜಾನೆ ಸ್ಫೋಟಿಸಿ ಕಟ್ಟಡದೊಳಗಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ತಮಿಳುನಾಡು ಮೂಲದ ಪೆರಿಯಣ್ಣನ್ ಮತ್ತು ಕರ್ನಾಟಕ ಮೂಲದ ಡಿ  ನಾಗ ಎಂದು ಗುರುತಿಸಲಾಗಿದೆ. ಪ್ರಸ್ತುತ ಕಲಾಡಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment