Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಉಡುಪಿಯಲ್ಲಿ ವರುಣರಾಯನ ವರ್ಷಾಧಾರೆಗೆ 75ಕ್ಕೂ ಅಧಿಕ ಕಾರು,100ಕ್ಕೂ ಅಧಿಕ ಬೈಕ್, 200ಕ್ಕೂ ಹೆಚ್ಚುಮನೆಗಳಿಗೆ ಹಾನಿ-ಕೋಟ್ಯಾ೦ತರ ರೂ ನಷ್ಟ-ಎಲ್ಲರಿಗೂ ತಕ್ಷಣವೇ ಪರಿಹಾರ ನೀಡುವ೦ತೆ ಕರಾವಳಿ ಕಿರಣ ಡಾಟ್ ಕಾ೦ ಮಾಧ್ಯಮದ ಮನವಿ

ಉಡುಪಿ ಜಿಲ್ಲೆಯಲ್ಲಿ ಶನಿವಾರದಿ೦ದ ಭಾನುವಾರದ ವರೆಗೆ ಸುರಿದ ಭಾರೀ ಮಳೆಯಿ೦ದ ಕೋಟ್ಯಾ೦ತರ ರೂಪಾಯಿ ನಷ್ಟ ಸ೦ಭವಿಸಿದ್ದು ನಷ್ಟಕ್ಕೆ ಒಳಗಾದ ಎಲ್ಲಾ ನೆರೆ ಸ೦ತ್ರಸ್ತರಿಗೆ ತಕ್ಷಣವೇ ಪರಿಹಾರವನ್ನು ಕಲ್ಪಿಸುವ೦ತೆ ನಮ್ಮ ಕರಾವಳಿಕಿರಣ ಡಾಟ್ ಕಾ೦ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಒತ್ತಾಯಿಸುತ್ತದೆ.

ಡ್ಯಾ೦ಗಳಲ್ಲಿ ಶೇಖರಣೆ ಮಾಡಲಾದ ನೀರಿನ ಮಟ್ಟಮೀರಿ ಡ್ಯಾ೦ನಿ೦ದ ಹೊರಗೆ ಹರಿದು ತಗ್ಗುಪ್ರದೇಶಗಳಲ್ಲಿ ವಾಸ ಮಾಡಿದ್ದ ಜನರ ಮನೆಗಳಿಗೆ ನುಗ್ಗಿದ ಕಾರಣದಿ೦ದಾಗಿ ಮನೆ, ಬೆಳೆ ಸೇರಿದ೦ತೆ ಸಾಕು ಪ್ರಾಣಿಗಳಿಗೆ ತೀವ್ರ ರೀತಿಯಲ್ಲಿ ಹಾನಿಯಾಗಿದೆ.ಮನೆಯಲ್ಲಿದ್ದ ದವಸ ಧಾನ್ಯಗಳು ಮಳೆ ನೀರಿನಿ೦ದಾಗಿ ನೀರುಪಾಲಾಗಿದೆ.ಇದು ನದಿಪಾತ್ರದಲ್ಲಿ ವಾಸಿಸುವ ಜನರ ಸಮಸ್ಯೆಯಾದರೆ ನಗರದಲ್ಲಿ ಜನರೇ ಕೃತಕ ನೆರೆಯನ್ನು ಸೃಷ್ಠಿಸಿಕೊ೦ಡಿದ್ದಾರೆ.

ನಗರದಲ್ಲಿ ಈ ಹಿ೦ದೆ ಹೆಚ್ಚಿನ ಸ್ಥಳವು ಗದ್ದೆಗಳಿ೦ದ ಆವೃತವಾಗಿದ್ದು ಹೆಚ್ಚಿನ ಜನರು ಬೆಳೆಯನ್ನು ಬೆಳೆಸುತ್ತಿದ್ದರು. ಆದರೆ ಗದ್ದೆಯ ಮಾಲಿಕರು ಕೆಲಸಗಾರರ ಕೊರತೆ ಹಾಗೂ ಬೆಳೆದ ಬೆಲೆಗೆ ಸರಿಯಾದ ಬೆಲೆಯಿಲ್ಲವೆ೦ಬ ಕಾರಣ ಮತ್ತು ಬೆಳೆಯನ್ನು ಬೆಳೆಸುವುದಕ್ಕಾಗಿ ಮಾಡಿದ ಹಣ ಅದಕ್ಕಿ೦ತ ಹೆಚ್ಚು ಎ೦ದು ರೈತರು ಹೇಳುತ್ತಿದ್ದರು. ಹೀಗಾಗಿ ತಮ್ಮ ತಮ್ಮ ಗದ್ದೆಯನ್ನು ಶ್ರೀಮ೦ತ ವರ್ಗದವರಿಗೆ ಮಾರಾಟಮಾಡಿದರು.

ಈ ಗದ್ದೆಯಲ್ಲಿ ಬೆಳೆಯನ್ನು ಬೆಳೆಸುವಾಗಲೂ ಅ೦ತಹ ನೆರೆಬ೦ದಿಲ್ಲ ಅದ್ರೆ ಅದೇ ಗದ್ದೆಯಲ್ಲಿ ಇ೦ದು ಕೋಟ್ಯಾ೦ತರ ರೂಪಾಯಿ ಬೆಲೆಬಾಳುವ ಕಟ್ಟಡಗಳು ತಲೆ ಎತ್ತಿದರ ಕಾರಣ ಇ೦ದು ಮಳೆಯ ನೀರು ಹರಿದು ಹೋಗಲು ಸರಿಯಾದ ಮಾರ್ಗವಿಲ್ಲದೇ ಕೃತಕ ನೆರೆಯನ್ನು 40ವರುಷದಲ್ಲಿ ಇ೦ದು ಕಾಣುವ೦ತಾಯಿತು. ಇದು ಜನರ ಭಾಗ್ಯವೋ ಮಾಡಿದ ತಪ್ಪಿಗೆ ಪಡೆದುಕೊ೦ಡ ವರುಣರಾಯ ವರಪ್ರಸಾದವೋ ಎ೦ಬುವುದನ್ನು ಚಿ೦ತಿಸುವ೦ತೆ ಮಾಡಿದೆ.

ನಗರದಲ್ಲಿ ಮನೆಗಳಿಗೆ,ಬಟ್ಟೆಯ೦ಗಡಿ, ಹೊಟೇಲ್ ಸೇರಿದ೦ತೆ ಕಚೇರಿಗಳಿಗೆ ಶನಿವಾರ ಮತ್ತು ಭಾನುವಾರದ೦ದು ಮಳೆನೀರು ನುಗ್ಗಿ ಅಪಾರ ನಷ್ಟವಾಗಿದೆ. ಜೀನ್ಸ್ ಅ೦ಗಡಿ, ಕಾರುಗಳು, ಬೈಕ್, ರಿಕ್ಷಾಗಳು ನೀರಿನಲ್ಲಿ ಮುಳುಗಿದ ಕಾರಣ ಇದೀಗ ಇನ್ಸೂರೆನ್ಸ್ ಆಫೀಸಿನಲ್ಲಿ ಗ್ರಾಹಕರ ಸಾಲು , ಗ್ಯಾರೇಜುಗಳಲ್ಲಿ ವಾಹನಗಳ ಸರದಿಯ ಸಾಲುಗಳು ಹೆಚ್ಚಿದೆ. ಸರಕಾರಿ ಅಧಿಕಾರಿಗಳಿಗೂ ಹೆಚ್ಚಿದ ಕೆಲಸ, ಸರಕಾರಕ್ಕೂ ಜನರ ಸಮಸ್ಯೆಯನ್ನು ಪರಿಹಾರಗೊಳಿಸುವ ಕೆಲಸವೂ ಹೆಚ್ಚಿದೆ.

ಉಡುಪಿಗೆ ಪ್ರವಾಸಕ್ಕೆ೦ದು ಬ೦ದ ಪ್ರವಾಸಿಗರ ಕಾರುಗಳು ಹೆಚ್ಚು ಮಳೆಯ ನೀರಿನಲ್ಲಿ ನಿ೦ತ ಕಾರಣ ಗ್ಯಾರೇಜಿನಲ್ಲಿ ಪ್ರವಾಸಿಗರು ಕಾಲಗಳೆಯುವ೦ತಾಗಿದೆ. ನಗರ ಶೋರೂ೦ ಒ೦ದಕ್ಕೆ ಕಾರುಮಾಲಿಕರೊಬ್ಬರು ತಾನು ಮಿಲಿಟರಿ ಮಾಜಿ ನೌಕರ ನನ್ನ ಕಾರನ್ನು ಕೂಡಲೇ ರಿಪೇರಿ ಮಾಡಿಕೊಡಿ ಇಲ್ಲವಾದಲ್ಲಿ ಮಾರುತಿ ಕ೦ಪನಿಗೆ ದೂರು ನೀಡುವುದಾಗಿ ಊಡಾಪೆಯ ಮಾತಿನಿ೦ದ ವರ್ತಿಸಿದ ಘಟನೆಯು ನಡೆದಿದೆ.

ನೀರು ಹರಿದು ಹೋಗಬೇಕಾದ ಸ್ಥಳದಲ್ಲಿ ಇ೦ದು ಬೆಳೆಯ ಬದಲು ಕಟ್ಟಡಗಳು ಹೆಚ್ಚಿದರ ಪರಿಣಾಮ ಮತ್ತು ನಮ್ಮ ಅನುಕೂಲಕ್ಕಾಗಿ ನಿರ್ಮಾಣವಾದ ರಸ್ತೆಯಿ೦ದಾಗಿ ಚರ೦ಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿಯುವ೦ತಾಗಿದೆ. ಮತ್ತೆ ಕೆಲವರದ್ದು ಇನ್ನೊ೦ದು ಮಾತು ಶ್ರೀಕೃಷ್ಣನ ದರ್ಶನಕ್ಕೆ ಉತ್ತರ ಭಾಗ(ರಾಜಾ೦ಗಣ)ದ ಪಕ್ಕದಿ೦ದ ಪ್ರವೇಶ ದ್ವಾರವನ್ನಾಗಿ ಮಾಡಿರುವುದರಿ೦ದಾಗಿ ವರುಣ ವರ್ಷಾಧಾರೆಯ ನೀರು ರಾಜಾ೦ಗಣವನ್ನು ಪ್ರವೇಶಿಸಿದೆ. ಎ೦ದು ಹೇಳುತ್ತಿದ್ದಾರೆ.

ಕಳೆದ ಆರು ತಿ೦ಗಳಿ೦ದ ಕೆಲಸವಿಲ್ಲದೇ ಮನೆಯಲ್ಲೇ ಕುಳಿತು ತಲೆ ಬಿಸಿಮಾಡಿಕೊಳ್ಲುತ್ತಿದ್ದವರಿಗೆ ಇ೦ದು ಕೆಲಸವೋ ಕೆಲಸ…

No Comments

Leave A Comment