Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಕುಖ್ಯಾತ ರೌಡಿ ಸುಭಾಶ್ ಯಾದವ್ ಮನೆ ಮೇಲೆ ಪೊಲೀಸ್ ದಾಳಿ; ಕೋಟ್ಯಂತರ ರೂ. ಆಸ್ತಿ ಜಪ್ತಿ

ಇಂದಿರಾಪುರಂ(ಲಕ್ನೋ): ಕುಖ್ಯಾತ ಗ್ಯಾಂಗ್ ಸ್ಟರ್, ಭೂ ಮಾಫಿಯಾದ ಕಿಂಗ್ ಪಿನ್ ಸುಭಾಶ್ ಯಾದವ್ ನಿವಾಸದ ಮೇಲೆ ಗಾಜಿಯಾಬಾದ್ ಪೊಲೀಸರು ಶನಿವಾರ(ಸೆಪ್ಟೆಂಬರ್ 19, 2020) ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ವರದಿ ತಿಳಿಸಿದೆ.

ಕೊಲೆ ಮತ್ತು ಅತ್ಯಾಚಾರ ಸೇರಿದಂತೆ ಹಲವಾರು ಆರೋಪಗಳಲ್ಲಿ ಯಾದವ್ ಶಾಮೀಲಾಗಿರುವುದಾಗಿ ವರದಿ ಹೇಳಿದೆ. ದಾಳಿಯಲ್ಲಿ ಸುಭಾಶ್ ಯಾದವ್ ಗೆ ಸೇರಿದ್ದ 1.5ರಿಂದ 2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಾಜಿಯಾಬಾದ್ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಕಾರುಗಳ ಸೇರಿದಂತೆ ಚರ ಮತ್ತು ಸ್ಥಿರಾಸ್ತಿ ಸೇರಿದೆ.

ಇಂದಿರಾಪುರಂ ಇನ್ಸ್ ಪೆಕ್ಟರ್ ಅವರು ಕ್ರಿಮಿನಲ್ ಕಾಯ್ದೆಯನ್ವಯ ಸುಭಾಶ್ ಯಾದವ್ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ವರದಿ ಹೇಳಿದೆ.

No Comments

Leave A Comment