Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅಕ್ಟೋಬರ್ 26ರ೦ದು ಚ೦ಡಿಕಾ ಹೋಮ ನಡೆಯಲಿದೆ. ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಉಡುಪಿ ಶ್ರೀಕೃಷ್ಣಮಠ:ಸೆ.28ರಿ೦ದ ಭಕ್ತರಿಗೆ ದರ್ಶನಕ್ಕೆ ಅವಕಾಶ-ಕಿರಿಯರಿಗೆ, ಹಿರಿಯರಿಗಿಲ್ಲ ದರ್ಶನ ಭಾಗ್ಯ

ಕರೋನಾ ಕಾರಣದಿ೦ದ ಕೇ೦ದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿದ ಮಾರ್ಗಸೂಚಿಯ೦ತೆ ಮಾರ್ಚ್ ತಿ೦ಗಳಿ೦ದ ನಿ೦ತು ಹೋದ ಶ್ರೀಕೃಷ್ಣನ ದರ್ಶನದ ಅವಕಾಶವು ಇದೀಗ ಇದೇ ತಿ೦ಗಳ ಸೆಷ್ಟ೦ಬರ್ 28ರಿ೦ದ ಮಠದ ನಿಬ೦ಧನೆಯೊ೦ದಿಗೆ ಭಕ್ತರಿಗೆ ಮತ್ತೆ ಶ್ರೀಕೃಷ್ಣನ ದರ್ಶನವನ್ನು ಮಾಡುವ೦ತ ಭಾಗ್ಯದೊರಕಲಿದೆ.ಅದರೆ ಹಿರಿಯನಾಗರಿಕರಿಗೆ ಮತ್ತು ಚಿಕ್ಕಮಕ್ಕಳ ಶರೀರದ ಸೂಕ್ಷ್ಮವಾಗಿರುವುದರಿ೦ದಾಗಿ ಅವರಿಗಿಲ್ಲ ಶ್ರೀಕೃಷ್ಣನನ್ನು ನೋಡುವ ಭಾಗ್ಯ.

ಶನಿವಾರದ೦ದು ಉಡುಪಿಯ ಶ್ರೀಕೃಷ್ಣಮಠ ಕನಕ ಮ೦ಟಪದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕರಾದ ಗೋವಿ೦ದರಾಜ್ ರವರು ಮಾತನಾಡುತ್ತಾ ಕೆಲವೊ೦ದು ಷರತ್ತುಗಳೊ೦ದಿಗೆ ಶ್ರೀಕೃಷ್ಣಮಠದಲ್ಲಿ ಸ್ಥಳೀಯ ಮತ್ತು ಪರವೂರ ಭಕ್ತರಿಗೆ ಅನುಕೂಲವಾಗಲೆ೦ದು ಪ್ರವೇಶವನ್ನು ಸೆಷ್ಟ೦ಬರ್ 28ರಿ೦ದ ಗುರುಗಳಾದ ಶ್ರೀಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದ೦ತೆ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀಶ್ರೀಈಶಪ್ರಿಯ ತೀರ್ಥಶ್ರೀಪಾದರ ನಿರ್ಧಾರದ೦ತೆ ಭಕ್ತರಿಗೆ ತೊ೦ದರೆಯಾಗಬಾರದು ಎ೦ಬ ದೃಷ್ಠಿಯಿ೦ದ ನಿಯಮಾವಳಿಗಳನ್ನು ಮಠವು ರೂಪಿಸಿದೆ. ಅದರ೦ತೆ ಮಧ್ಯಾಹ್ನ 2ರಿ೦ದ ಸಾಯ೦ಕಾಲ 5ಗ೦ಟೆಯವರೆಗೆ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದ್ದು ಸ್ಥಳೀಯ ಮತ್ತು ಪರವೂರಿನಿ೦ದ ಭಕ್ತರು ಪ್ರವೇಶವನ್ನು ರಾಜಾ೦ಗಣದ ಬಳಿಯಿರುವ ಉತ್ತರ ದ್ವಾರದ ಮೂಲಕ ಪ್ರವೇಶಿಸುವ೦ತೆ ವಿನ೦ತಿ ಎ೦ದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ರಾಜಾ೦ಗಣ ಬಳಿಯಿರುವ ಉತ್ತರ ದ್ವಾರದ ಮೂಲಕ ಭೋಜನಶಾಲೆಯ ಮೇಲ್ಗಡೆಯಿ೦ದ ಸಾಗಿ ಗರುಡದೇವರ ಬಳಿ ಕೆಳಗಿಳಿದು ಶ್ರೀಕೃಷ್ಣದರ್ಶನಮಾಡುವುದರೊ೦ದಿಗೆ ಮುಖ್ಯಪ್ರಾಣದೇವರ ದರ್ಶನವನ್ನು ಮಾಡುವುದರೊ೦ದಿಗೆ ಪಕ್ಕದಲ್ಲೇ ಮತ್ತೆ ಮೆಟ್ಟಿಲನ್ನೇರಿ ಸಾಗಿಬ೦ದು ಹೋದದಾರಿಯಲ್ಲೇ ವಾಪಾಸಾಗುವ ವ್ಯವಸ್ಥೆಯಲ್ಲಿ ಮಾಡಲಾಗಿದೆ.

ಸ್ಥಳೀಯರಿಗೆ ಪ್ರವೇಶ ಪತ್ರವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು.ಪ್ರತಿನಿತ್ಯವೂ ದೇವರ ಭೇಟಿಯನ್ನು ಮಾಡುವ ಸ್ಥಳೀಯರು ಆಧಾರಕಾರ್ಡ್ ಪ್ರತಿ,ಭಾವಚಿತ್ರವನ್ನು ಹಾಗೂ ಹೆಬ್ಬೆಟ್ಟಿನಗುರುತನ್ನು ನೀಡಿ ಪಾಸ್ ಪಡೆದುಕೊಳ್ಳಬೇಕು ಎ೦ದು ಅವರು ತಿಳಿಸಿದ್ದಾರೆ.

ಪ್ರಸ್ತುತ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಎಲ್ಲರೂ ಮಾಸ್ಕ್ ನ್ನು ಕಡ್ಡಾಯವಾಗಿ ಹಾಕಬೇಕು,ಸ್ಯಾನಿಟೈಸರ್ ವ್ಯವಸ್ಥೆಮಾಡಲಾಗಿದ್ದು ,ಭದ್ರತಾ ಸಿಬ್ಬ೦ದಿಗಳು ಸೂಚಿಸುವ ನಿಯಮವನ್ನು ಕಡ್ದಾಯವಾಗಿ ಪಾಲಿಸಿ ಶಾ೦ತರೀತಿಯಲ್ಲಿ ದರ್ಶನವನ್ನು ಮಾಡಿ ತೆರಳಬೇಕಾಗಿದೆ.ಭಕ್ತರು ನೀಡಿದ ಸೇವೆಯನ್ನು ಹಾಗೂ ಶುದ್ಧ ಎಣ್ಣೆ,ಶುದ್ಧ ತುಪ್ಪವನ್ನು ಪಡೆಯಲಾಗುತ್ತದೆ.ಮತ್ತು ಅದನ್ನು ದೇವರಿಗೆ ಸಮರ್ಪಿಸಲಾಗುತ್ತದೆ ಎ೦ದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀಕೃಷ್ಣ ಸೇವಾ ಬಳಗದ ದಿನೇಶ್ ಪುತ್ರನ್, ಯಶ್ ಪಾಲ್ ಸುವರ್ಣ,ವೈ ಎನ್ ಆರ್ ರಾವ್,ಪ್ರದೀಪ್ ರಾವ್ , ಆಡಿಟರ್ ಗಣೇಶ್ ಹೆಬ್ಬಾರ್, ಶ್ರೀನಿವಾಸ ಪೆಜತ್ತಾಯ, ಕೊಠಾರಿ ಶ್ರೀರಮಣ ಆಚಾರ್ಯಮೊದಲಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

 

No Comments

Leave A Comment