Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಡ್ರಗ್ಸ್ ಪ್ರಕರಣ: ನಿರೂಪಕ ಅಕುಲ್ ಬಾಲಾಜಿ, ಮಾಜಿ ಶಾಸಕರ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್

ಚಂದನವನಕ್ಕೆ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಮತ್ತೆ ಮೂವರಿಗೆ ನೋಟಿಸ್ ನೀಡಿದೆ.

ಕಾಟನ್ ಪೇಟೆಯಲ್ಲಿ ದಾಖಲಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ನ ಮೂವರಿಗೆ ನೋಟಿಸ್ ನೀಡಿದೆ.

ಮಾಜಿ ಶಾಸಕ ಆರ್ ವಿ .ದೇವರಾಜ್ ಅವರ ಪುತ್ರ ಯುವರಾಜ್, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಂತೋಷ್‌ ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿ ಅವರಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ರವಾನಿಸಿದ್ದಾರೆ.

ಮೂವರೂ ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನಲ್ಲಿ ತಿಳಿಸಿದೆ.

ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿರುವ ಅಕುಲ್ ಬಾಲಾಜಿ “ನಾನು ಹೈದರಾಬಾದ್ ನಲ್ಲಿದ್ದೇನೆ. ನನಗೆ ಸಿಸಿಬಿ ನೋಟೀಸ್ ಸಿಕ್ಕಿದೆ. ನಾಳೆ ವಿಚಾರಣೆಗೆ ಕರೆಯಲಾಗಿದ್ದು ಫ್ಲೈಟ್ ಅಥವಾ ಡ್ರೈವ್ ಮೂಲಕ ಬೆಂಗಳೂರಿಗೆ ತಲುಪಿ ವಿಚಾರಣೆಗೆ ಹಾಜರಾಗುತ್ತೇನೆ” ಎಂದಿದ್ದಾರೆ.

ಇನ್ನೊಂದೆಡೆ ನಟ ಸಂತೋಷ್ ಕುಮಾರ್ ಸಹ ಮಾತನಾಡಿ “ನಾನು ಸಂಬಂಧಿಕರ ಮನೆ ಕಾರ್ಯಕ್ರಮದ ನಿಮಿತ್ತ ಮೈಸೂರಿನಲ್ಲಿದ್ದು ನಾಳೆ ವಿಚಾರಣೆಗೆ ಹಾಜರಾಗುತ್ತೇನೆ.” ಎಂದಿದ್ದಾರೆ.

No Comments

Leave A Comment