Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಉಡುಪಿ:ಇತಿಹಾಸ ಪ್ರಸಿದ್ಧ ಹೊಟೇಲ್ ರೋಯಲ್ ಮಾಲ್ ಕಟ್ಟಡ ಕುಸಿತ: ತಪ್ಪಿದ ಜೀವಹಾನಿ

ಉಡುಪಿ ಚಿತ್ತರ೦ಜನ್ ಸರ್ಕಲ್ ಬಳಿಯಲ್ಲಿನ ನೂರಾರು ವರುಷಗಳ ಕಾಲ ಇತಿಹಾಸವಿರುವ ಪ್ರಸಿದ್ಧ ಹೊಟೇಲ್ “ರೋಯಲ್ ಮಾಲ್” ಕಟ್ಟಡವು ಶುಕ್ರವಾರದ೦ದು ಮಧ್ಯಾಹ್ನ ಕುಸಿದು ಬಿದ್ದ ಘಟನೆ ನಡೆದಿದೆ.

ಕಟ್ಟಡವು ಸುಮಾರು ವರುಷಗಳ ಕಾಲ ಹಿ೦ದಿನದಾಗಿದ್ದು ಕಳೆದ ಮೂರು ನಾಲ್ಕುದಿನಗಳಿ೦ದ ಸುರಿಯುತ್ತಿರುವ ಮಳೆಯಿ೦ದಾಗಿ ಕಟ್ಟಡ ಉತ್ತರ ಭಾಗವು ಕುಸಿದಿದೆ.ಈ ಸ೦ದರ್ಭದಲ್ಲಿ ಎರಡು ಅ೦ಗಡಿಗಳು ವ್ಯಾಪಾರಕ್ಕಾಗಿ ತೆರೆದಿತ್ತು.

ಆರ೦ಭದಲ್ಲಿ ಕಟ್ಟಡದ ಮೇಲ್ಬಾಗದಿ೦ದ ಮಣ್ಣುಸುರಿಯಲಾರ೦ಭಿಸಿದ್ದನ್ನು ಕ೦ಡು ಅ೦ಗಡಿಮಾಲಿಕ ಅ೦ಗಡಿಯಿ೦ದ ಹೊರಗಡೆಧಾವಿಸಿದ್ದರ ಪರಿಣಾಮವಾಗಿ ಪ್ರಾಣಾಪಾಯದಿ೦ದ ಪರಾಗಿದ್ದಾರೆ. ಪಕ್ಕದಲ್ಲಿದ್ದ ಹೊಟೇಲ್ ದ್ವಾರಕದಲ್ಲಿ ಕೆಲಸದ ಮಹಿಳೆಯೊಬ್ಬರು ಪಾತ್ರೆಯನ್ನು ತೊಳೆಯುತ್ತಿದ್ದ ಸಮಯದಲ್ಲಿ ಈಘಟನೆ ನಡೆದಿದೆ.

ಕಟ್ಟಡವು ಭಾರೀ ವರುಷಗಳ ಕಾಲದ ಹಳೆಯ ಕಟ್ಟಡವಾಗಿದ್ದು ಇದೀಗ ಕು೦ದಾಪುರದ ಶೆಟ್ಟಿ ಎ೦ಬವರ ಮಾಲಿಕ್ವತದಲ್ಲಿ ನಡೆಯುತ್ತಿತ್ತು.

ಹೊಟೇಲ್ ನಲ್ಲಿ ಈ ಹಿ೦ದೆ ಅಕ್ರಮವ್ಯವಹಾರಗಳು ನಡೆಯುತ್ತಿದ್ದು ಭಾರೀ ಪ್ರಸಿದ್ಧಿ ಪಡೆದಿದೆ.ಘಟನೆಯ ಸ್ಥಳಕ್ಕೆ ನಗರ ಪೊಲೀಸರು ಮತ್ತು ಅಗ್ನಿಶಾಮಕದಳದವರು ಧಾವಿಸಿದ್ದು ಇದೀಗ ಭಾರೀ ಜನಸ೦ಖ್ಯೆ ಈ ಘಟನಾ ಸ್ಥಳದಲ್ಲಿ ಜಮಾಯಿಸಿದೆ.

ಕಟ್ಟಡ ಕುಸಿದ ಸ೦ದರ್ಭದಲ್ಲಿ ಯಾರೋಬ್ಬರು ಹೊಟೇಲ್ ರೂ೦ನಲ್ಲಿ ಇಲ್ಲದೇ ಇದ್ದ ಕಾರಣದಿ೦ದಾಗಿ ಸ೦ಭವಿಸ ಬಹುದಾದ ಭಾರೀ ಅಪಾಯ ತಪ್ಪಿತೆನ್ನಲಾಗಿದೆ.

ಉಡುಪಿ ನಗರಸಭೆ ಆಯುಕ್ತ ಆನಂದ ಸಿ ಕಲ್ಲೋಳಿಕರ್, ಭಾಗಶಃ ಕುಸಿದಿರುವ ಈ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡುತ್ತೇವೆ. ನಗರದಲ್ಲಿರುವ ಹಳೆಯ, ಜನವಸತಿಗೆ ಯೋಗ್ಯವಲ್ಲದ ಕಟ್ಟಡಗಳನ್ನು ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸಲಾಗುವುದು ಎಂದರು.

No Comments

Leave A Comment