Log In
BREAKING NEWS >
ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

“ಡ್ರಗ್ಸ್‌’ ದಂಧೆ ಪ್ರಕರಣ:ದಿಗಂತ್‌ – ಐಂದ್ರಿತಾ ಹೇಳಿಕೆ ತೀವ್ರ ಪರಿಶೀಲನೆಯಲ್ಲಿ

ಬೆಂಗಳೂರು: ಈಗಾಗಲೇ ವಿಚಾರಣೆಗೆ ಒಳಗಾಗಿರುವ ನಟ ದಿಗಂತ್‌ ಮತ್ತು ಅವರ ಪತ್ನಿ ಐಂದ್ರಿತಾ ರೇ ಹೇಳಿಕೆಗಳನ್ನು ಸಿಸಿಬಿ ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ದಂಪತಿ ನೀಡಿರುವ ಹೇಳಿಕೆಗಳನ್ನು ಈಗಾಗಲೇ ಬಂಧಿತರಾಗಿದ್ದ ಆರೋಪಿಗಳ ಹೇಳಿಕೆಗಳೊಂದಿಗೆ ತಾಳೆ ಹಾಕಲಾಗುತ್ತಿದೆ. ಎರಡೂ ಹೇಳಿಕೆ ಗಳಲ್ಲಿ ದಂಪತಿ ಕುರಿತ ಸಾಕ್ಷ್ಯಗಳು ಲಭ್ಯವಾದರೆ ಅಥವಾ ಆರೋಪಿ ಗಳ ಕುರಿತು ಹೆಚ್ಚಿನ ಮಾಹಿತಿ ಬೇಕಿ ದ್ದರೆ, ಮತ್ತೂಮ್ಮೆ ವಿಚಾರಣೆ ನಡೆಸಲು ತನಿಖಾಧಿಕಾರಿಗಳು ತೀರ್ಮಾನಿ ಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಜನಾ ಇಂದು ನ್ಯಾಯಾಲಯಕ್ಕೆ
ಈ ಬೆನ್ನಲ್ಲೇ “ಡ್ರಗ್ಸ್‌’ ದಂಧೆ ಪ್ರಕರಣ ದಲ್ಲಿ ಸಿಲುಕಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ನ್ಯಾಯಾಂಗ ಬಂಧನದ ಅವಧಿ ಶುಕ್ರವಾರ ಮುಕ್ತಾಯವಾಗಲಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಸಂಜನಾ ವಿರುದ್ಧದ ಪ್ರಕರಣ ವನ್ನು ಎನ್‌ಡಿಪಿಎಸ್‌ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಸಂಜನಾ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಶುಕ್ರವಾರವೇ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ತನಿಖೆ ಮುಂದುವರಿಕೆ
ಮತ್ತೂಂದೆಡೆ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಾದ ಶಿವಪ್ರಕಾಶ್‌, ಆದಿತ್ಯ ಆಳ್ವ, ಶೇಖ್‌ ಫಾಜಿಲ್‌ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡಗಳನ್ನು ಕೂಡ ರಚಿಸಲಾಗಿದೆ.
ಪ್ರಮುಖ ಆರೋಪಿ ವೀರೇನ್‌ ಖನ್ನಾ ನೀಡಿರುವ ಮಾಹಿತಿ ಆಧರಿಸಿ ಆರೋಪಿ ಆದಿತ್ಯ ಅಗರ್‌ವಾಲ್‌ ಎಂಬಾತನನ್ನು ಬಾಡಿ ವಾರಂಟ್‌ ಮೂಲಕ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment