Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಮಾಗ ಮಾಸದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮವು ಜರಗಲಿದೆ.....ವರ್ಷ೦ಪ್ರತಿ ನವರಾತ್ರೆಯ೦ದು ನಡೆಯಲಿರುವ ಶ್ರೀಶಾರದಾ ಪೂಜಾ ಕಾರ್ಯಕ್ರಮವು ವಿಜೃ೦ಭಣೆಯಲ್ಲಿ ಜರಗಲಿದೆ....

14 ಲಕ್ಷ ರೂ. ನೆರವು ಬಂದರೂ ಬದುಕಲಿಲ್ಲ ಪತಿ! ಹೆಣ್ಮಗಳ ಮನವಿಗೆ ಮಿಡಿದ “ಆಪತ್ಭಾಂಧವ’ರು

ಮಂಗಳೂರು: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ತಮ್ಮ ಪತಿಯನ್ನು ಉಳಿಸಲು ಹಣಕಾಸಿನ ನೆರವು ನೀಡಿ ಎಂದು ಮಹಿಳೆಯೋರ್ವರು ವೀಡಿಯೋ ಮೂಲಕ ಮಾಡಿದ ಮನವಿಗೆ ಒಂದೇ ದಿನ 14 ಲಕ್ಷ ರೂ. ನೆರವು ಹರಿದು ಬಂದಿದೆ. ಆದರೆ ಕೊನೆಯ ಕ್ಷಣದವರೆಗೆ ಹೋರಾಡಿದರೂ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಮನ ಮಿಡಿಯುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮಂಗಳೂರಿನ ಬೋಳದ ರಂಜೇಶ್‌ ಶೆಟ್ಟಿ ಅವರು ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕೊರೊನಾ ಪಾಸಿಟಿವ್‌ ಬಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ, ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಐಸಿಯುವಿಗೆ ದಾಖಲು ಮಾಡುವಂತೆ ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬವಾದ ಕಾರಣ ಹಣ ಹೊಂದಿಸಲು ಕಷ್ಟಪಡುತ್ತಿದ್ದ ಅವರ ಪತ್ನಿ ಗೀತಾ ಅವರ ನೆರವಿಗೆ ಬಂದದ್ದು, ಸಾಮಾಜಿಕ ಕಾರ್ಯಕರ್ತ ಆಸಿಫ್‌ ಆಪತ್ಭಾಂಧವ. ಆಸಿಫ್‌ ಅವರು ತಮ್ಮ ಮೊಬೈಲ್‌ನಲ್ಲಿ ಗೀತಾ ಅವರ ಮನವಿಯನ್ನು ವೀಡಿಯೋ ಮಾಡಿ, ಬ್ಯಾಂಕ್‌ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆಯೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದರು. ಆಸಿಫ್‌ ವೀಡಿಯೋ ನೋಡಿದ ಹಲವಾರು ಮಂದಿ ಗೀತಾ ಮನವಿಗೆ ಸ್ಪಂದಿಸಿದ್ದು, ಒಂದೇ ದಿನದಲ್ಲಿ 14 ಲಕ್ಷ ರೂ. ಗೀತಾ ಅವರ ಖಾತೆಗೆ ಜಮಾಯಿಸಿದ್ದಾರೆ.

ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ವೀಡಿಯೋ ಅಪ್ಲೋಡ್‌ ಮಾಡಿದ ತತ್‌ಕ್ಷಣ ವೈಯಕ್ತಿಕ ನೆಲೆಯಿಂದ 50 ಸಾವಿರ ರೂ. ನೀಡಿದ್ದಾರೆ. ಬುಧವಾರ ಬೆಳಗ್ಗೆ ಸಂಘದ ವತಿಯಿಂದ ಇನ್ನೂ 25 ಸಾವಿರ ರೂ.ಗಳನ್ನು ನೀಡಿದ್ದಾರೆ. ಅನೇಕ ಸಹೃದಯರು ಗೀತಾ ಅವರಿಗೆ ನೆರವು ನೀಡಿದ್ದಾರೆ ಎಂದು ಆಸಿಫ್‌ ಆಪತ್ಭಾಂಧವ ಅವರು ತಿಳಿಸಿದ್ದಾರೆ.

ಕೊನೆಗೂ ಬದುಕಲಿಲ್ಲ ಪತಿ
ಗಂಭೀರ ಸ್ಥಿತಿಯಲ್ಲಿದ್ದ ಪತಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಗೀತಾ ಅವರ ಮನವಿ ವಿಧಿಗೆ ಕೇಳಿಸಲೇ ಇಲ್ಲ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಗೀತಾರ ಪತಿ ರಂಜೇಶ್‌ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಪ್ರಾಣ ಕಳೆದುಕೊಂಡಿದ್ದಾರೆ. ತಂದೆಯ ಅಗಲಿಕೆಯಿಂದ ಪುಟ್ಟ ಮಗನೂ ದುಃಖದ ಮಡುವಿನಲ್ಲಿದ್ದಾನೆ.

No Comments

Leave A Comment