Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಮಾಗ ಮಾಸದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮವು ಜರಗಲಿದೆ.....ವರ್ಷ೦ಪ್ರತಿ ನವರಾತ್ರೆಯ೦ದು ನಡೆಯಲಿರುವ ಶ್ರೀಶಾರದಾ ಪೂಜಾ ಕಾರ್ಯಕ್ರಮವು ವಿಜೃ೦ಭಣೆಯಲ್ಲಿ ಜರಗಲಿದೆ....

ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾ: ಸದನದಲ್ಲಿ ಜಯಾ ಬಚ್ಚನ್ ಹೇಳಿಕೆಗೆ ಹಿರಿಯ ನಟಿ ಜಯಪ್ರದಾ ತೀವ್ರ ಆಕ್ಷೇಪ

ನವದೆಹಲಿ: ಬಾಲಿವುಡ್ ನಲ್ಲಿ ವ್ಯಾಪಕವಾಗಿ ಡ್ರಗ್ ದಂಧೆ ನಡೆಯುತ್ತಿದೆ, ಈ ವಿಚಾರವನ್ನು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ರಾಜಕೀಯಗೊಳಿಸುತ್ತಿದ್ದಾರೆ ಎಂಬ ಬಿಜೆಪಿ ಲೋಕಸಭಾ ಸದಸ್ಯ ರವಿ ಕಿಶನ್ ಹೇಳಿಕೆಗೆ ಹಿರಿಯ ನಟಿ ಹಾಗೂ ಭಾರತೀಯ ಜನತಾ ಪಕ್ಷದ ನಾಯಕಿ ಜಯಪ್ರದಾ ಬೆಂಬಲ ಸೂಚಿಸಿದ್ದಾರೆ.

ಯುವಕರನ್ನು ಡ್ರಗ್ಸ್ ಚಟದಿಂದ ಮುಕ್ತಗೊಳಿಸುವುದು ನನಗೆ ಮುಖ್ಯವಾಗಿರುವುದರಿಂದ ನಾನು ರವಿ ಕಿಶನ್ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ. ಡ್ರಗ್ಸ್ ಮಾಫಿಯಾ ವಿರುದ್ಧ ನಾವೆಲ್ಲರೂ ಧ್ವನಿಯೆತ್ತಬೇಕು, ಈ ಚಟದಿಂದ ಯುವಜನತೆಯನ್ನು ಕಾಪಾಡಬೇಕು. ಜಯಾ ಬಚ್ಚನ್ ಅವರ ಭಾವನೆಯನ್ನು ನಾನು ಗೌರವಿಸುತ್ತೇನೆ, ಆದರೆ ಇದು ರಾಜಕೀಯಗೊಳಿಸುವ ವಿಷಯ ಅಲ್ಲ. ಅವರಿಗೆ ಅಂತಹ ಹೇಳಿಕೆ ನೀಡುವ ಅಧಿಕಾರ ಇಲ್ಲ ಎಂದಿದ್ದಾರೆ.

ಈ ಡ್ರಗ್ಸ್ ಮಾಫಿಯಾ ವಿಚಾರವನ್ನು ಜಯಾ ಬಚ್ಚನ್ ಅವರು ಏಕೆ ಅಷ್ಟೊಂದು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ, ಯುವಜನತೆಯನ್ನು ರಕ್ಷಿಸುವ ಬಗ್ಗೆ ಅವರು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಮಾತನಾಡಬೇಕು, ಹಾಗಾದರೆ ಮಾತ್ರ ಇನ್ನೊಂದು ಸುಶಾಂತ್ ಸಿಂಗ್ ರಜಪೂತ್ ನಂತಹ ಪ್ರಕರಣ ನಡೆಯಲು ಸಾಧ್ಯವಿಲ್ಲ. ಸುಶಾಂತ್ ಸಿಂಗ್ ರಜಪೂತ್ ಇಂದು ನಮ್ಮೊಂದಿಗಿಲ್ಲ, ಇಡೀ ದೇಶ ಅವರ ಕುಟುಂಬಕ್ಕೆ ನ್ಯಾಯ ಬಯಸುತ್ತಿದೆ ಎಂದು ಜಯಪ್ರದಾ ಹೇಳಿದರು.

ಚಿತ್ರೋದ್ಯಮದ ವಿರುದ್ಧ ಕಳಂಕವನ್ನು ಉಂಟುಮಾಡಲು ವ್ಯವಸ್ಥಿತವಾಗಿ ಪಿತೂರಿ ನಡೆಯುತ್ತಿದೆ ಎಂದು ನಿನ್ನೆ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಶೂನ್ಯ ಅವಧಿಯ ನೊಟೀಸ್ ನೀಡಿದ್ದರು. ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಲೋಕಸಭಾ ಸಂಸದರೊಬ್ಬರು ನಿನ್ನೆ ಸದನದಲ್ಲಿ ನೀಡಿರುವ ಹೇಳಿಕೆ ನನಗೆ ನಿಜಕ್ಕೂ ಚಲನಚಿತ್ರ ಕ್ಷೇತ್ರದ ಭಾಗವಾಗಿ ನಾಚಿಕೆಯನ್ನುಂಟುಮಾಡಿದೆ ಎಂದು ಜಯಾ ಬಚ್ಚನ್ ರವಿ ಕಿಶನ್ ಅವರ ಹೆಸರು ಹೇಳದೆಯೇ ಪ್ರಸ್ತಾಪಿಸಿದ್ದರು.

ಜಯಾ ಬಚ್ಚನ್ ಅವರು ಸದನದಲ್ಲಿ ನೀಡಿರುವ ಹೇಳಿಕೆಗೆ ದೇಶಾದ್ಯಂತ ಪರ-ವಿರೋಧ ವ್ಯಕ್ತವಾಗುತ್ತಿದ್ದು ಬಾಲಿವುಡ್ ನ ಹಲವು ಕಲಾವಿದರಾದ ಶಬಾನಾ ಆಜ್ಮಿ, ತಾಪ್ಸಿ ಪನ್ನು, ದಿಯಾ ಮಿರ್ಜಾ, ಜೆನೆಲಿಯಾ ದೇಶ್ ಮುಖ್, ಸೋನಂ ಕಪೂರ್, ಅನುಭವ್ ಸಿನ್ಹಾ ಹಾಗೂ ಇತರರರು ಜಯಾ ಬಚ್ಚನ್ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

No Comments

Leave A Comment