Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಖ್ಯಾತ ಇತಿಹಾಸ ವಿದ್ವಾಂಸಕಿ ಕಪಿಲಾ ವಾತ್ಸಾಯನ ನಿಧನ

ನವದೆಹಲಿ: ದೇಶ ಕಂಡ ಖ್ಯಾತ ಇತಿಹಾಸ ವಿದ್ವಾಂಸಕಿ ಕಪಿಲಾ ವಾತ್ಸಾಯನ ಅವರು ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು.

ಇತಿಹಾಸ, ಕಲೆ, ವಾಸ್ತುಶಿಲ್ಪ ಮತ್ತು ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸಿದ್ಧ ವಿದ್ವಾಂಸರಾಗಿದ್ದ ಕಪಿಲಾ ವಾತ್ಸಾಯನ್ ಅವರು ತಮ್ಮ ದೆಹಲಿ ನಿವಾಸದಲ್ಲಿ ಬುಧವಾರ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಗುಲ್ ಮೊಹರ್ ಎನ್ ಕ್ಲೇವ್ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನ ಕಾರ್ಯದರ್ಶಿ ಕನ್ವಾಲ್ ಅಲಿ ಅವರು ಹೇಳಿದ್ದಾರೆ. ಇದೇ ಟ್ರಸ್ಟ್ ನಲ್ಲಿ ಕಪಿಲಾ ವಾತ್ಸಾಯನ್ ಆಜೀವ ಪರ್ಯಂತ ಸದಸ್ಯತ್ವ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಕಪಿಲಾ  ವಾತ್ಸಾಯನ್ ಅವರು, ಐಐಸಿಯ ಏಷ್ಯಾ ಪ್ರಾಜೆಕ್ಟ್ ನಲ್ಲೂ ಸದಸ್ಯರಾಗಿದ್ದಾರೆ.

ಇನ್ನು ಕಪಿಲಾ ವಾತ್ಸಾಯನ್ ಅವರ ಸಾವಿಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್ ಅವರು ಸಂತಾಪ ಸೂಚಿಸಿದ್ದಾರೆ.

No Comments

Leave A Comment