Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಜಪಾನ್‌ನ ಹೊಸ ಪ್ರಧಾನಿಯಾಗಿ ಯೊಶಿಹಿಡೆ ಅಧಿಕೃತ ಆಯ್ಕೆ: ಪ್ರಧಾನಿ ಮೋದಿ ಶುಭಾಶಯ

ಟೋಕಿಯೊ: ಜಪಾನ್‌ನ ಪ್ರಧಾನಮಂತ್ರಿಯಾಗಿ ಯೊಶಿಹಿಡೆ ಸುಗಾ ಅಧಿಕೃತವಾಗಿ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಶುಭಾಶಯಗಳನ್ನು ಕೋರಿದ್ದಾರೆ.

ನಿರ್ಗಮಿತ ಪ್ರಧಾನಿ ಶಿಂಜೊ ಅಬೆ ಅವರ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದ ಸುಗಾ ಅವರನ್ನು ಸಂಸತ್ತಿನ ಕೆಳಮನೆ ಚುನಾಯಿಸಿದೆ. ಕೆಳಮನೆಯಲ್ಲಿ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಬಹುಮತ ಹೊಂದಿದೆ.

ಜಪಾನ್‌ನ ಆರ್ಥಿಕ ಸ್ಥಿತಿಯು ಮುಖ್ಯವಾಗಿ ಕೋವಿಡ್‌ನ ಸಮಯದಲ್ಲಿ ದೊಡ್ಡ ಸವಾಲು ಎದುರಿಸುತ್ತಿದ್ದು, ಇದಕ್ಕೆ ಆರ್ಥಿಕ ಕಾರ್ಯತಂತ್ರವನ್ನು ಒಳಗೊಂಡಂತೆ ಅಬೆ ಅವರು ಜಾರಿಗೆ ಅನೇಕ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಸುಗಾ ವಾಗ್ದಾನ ಮಾಡಿದ್ದಾರೆ.

ಜಪಾನ್‌ನ ಹೊಸ ಪ್ರಧಾನಿಯಾಗಿ ಯೊಶಿಹಿಡೆ ಅಧಿಕೃತ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಪಾನ್ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಯೊಶಿಹಿಡೆ ಸುಗಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ವಿಶೇಷವಾದ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಜಂಟಿಯಾಗಿ ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.

No Comments

Leave A Comment