ಪ್ರಿಯಕರನೊಂದಿಗೆ ಸೇರಿ ಪತಿಯ ಕೊಂದ ಮಹಿಳೆ: ರೊಚ್ಚಿಗೆದ್ದ ಗ್ರಾಮಸ್ಥರಿಂದ ಮೂವರ ಹತ್ಯೆ
ಜಾರ್ಖಂಡ್; ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತನೊಂದಿಗೆ ಸೇರಿಕೊಂಡು ಗಂಡನನ್ನೇ ಹತ್ಯೆ ಮಾಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮೂವರನ್ನು ಕೋಲುಗಳಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನೀಲಂ ಕುಜೂರ್ ಎಂಬ ಮಹಿಳೆ ತನ್ನ ಪ್ರಿಯಕರ ಸುದೀಪ್ ದುಂಡುಂಗ್ ನೊಂದಿಗೆ ಸೇರಿಕೊಂಡು ಪತಿಯಾದ ಮಾರಿಯಾನಸ್ ಕುಜೂರ್ ನನ್ನು ಸೋಮವಾರ ರಾತ್ರಿ ಹತ್ಯೆ ಮಾಡಿದ್ದಳು.
ನೊಂಗಾ ಪ್ರದೇಶದ ಸುದೀಪ್, ತನ್ನ ಸ್ನೇಹಿತ ಪ್ರಕಾಶ್ ಕುಲ್ಲುವಿನೊಂದಿಗೆ ಸೇರಿಕೊಂಡು ಪ್ರಿಯತಮೆ ನೀಲಂನನ್ನು ಭೇಟಿಯಾಗಲು ಡೆಂಗಾರ್ಡಿಹ್ ಗ್ರಾಮಕ್ಕೆ ಬಂದಿದ್ದಾನೆ. ಮಾತ್ರವಲ್ಲದೆ ಅದೇ ರಾತ್ರಿ ನೀಲಂನ ಗಂಡನನ್ನು ಹತ್ಯೆಗೈಯಲು ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕಿಳಿಸಿದ್ದರು.