Log In
BREAKING NEWS >
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆ: 29 ಸಚಿವರಿಂದ ಪ್ರಮಾಣ ವಚನ ಸ್ವೀಕಾರ...

‘ಮರ್ಫಿ’ಯಲ್ಲಿ ಪ್ರಭು ಮುಂಡ್ಕೂರ್ ಗೆ ನಿಶ್ವಿಕಾ ನಾಯ್ಡು ಜೋಡಿ!

“ಮರ್ಫಿ” ಎಂಬ ರೊಮ್ಯಾಂಟಿಕ್ ಡ್ರಾಮಾಗಾಗಿ  ಜೊತೆಯಾಗಿರುವ “ಊರ್ವಿ” ನಿರ್ದೇಶಕ ಬಿ ಎಸ್ ಪ್ರದೀಪ್ ವರ್ಮಾ ಮತ್ತು ನಟ ಪ್ರಭು ಮುಂಡ್ಕೂರ್  ಅವರೀಗ ತಮ್ಮ ಚಿತ್ರದ ನಾಯಕಿಯನ್ನಾಗಿ ನಟಿ ನಿಶ್ಚಿಕಾ ನಾಯ್ಡು ಅವರನ್ನು ಆಯ್ಕೆ ಮಾಡಿದ್ದಾರೆ. “ಅಮ್ಮ ಐ ಲವ್ ಯು”  ಮತ್ತು”ಪಡ್ಡೆ ಹುಲಿ” ಚಿತ್ರದ ನಟಿ ಕೊನೆಯ ಬಾರಿಗೆ ಪ್ರಜ್ವಲ್ ದೇವರಾಜ್ ಅಭಿನಯದ “ಜಂಟಲ್ ಮ್ಯಾನ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. “ಗಾಳಿಪಟ 2” ರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಗೆ ಇದೀಗ ಈ ಚಿತ್ರ ಸಧ್ಯ ಅವರ ಬುಟ್ಟಿಯಲ್ಲಿರುವ ಏಕೈಕ ಯೋಜನೆಯಾಗಿದೆ.

“ಮರ್ಫಿ”ಗೆ ಪ್ರದೀಪ್ ವರ್ಮಾ ಚಿತ್ರಕಥೆ ಬರೆದಿದ್ದು ನಟ ಪ್ರಭು ಮುಂಡ್ಕೂರ್ ಸಹ ಚಿತ್ರಕಥೆ ತಯಾರಿಸಿದ್ದಾರೆ. ಇದು ಪ್ರಭು ಮುಂಡ್ಕೂರ್ ಮತ್ತು ನಿಶ್ವಿಕಾ ಅವರು ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಾಗಿದೆ, ವಿಕ್ರಮ್ ರವಿಚಂದ್ರನ್ ಅವರ “ತ್ರಿವಿಕ್ರಮ” ಜತೆಗೆ ಸಂಪರ್ಕ ಹೊಂದಿರುವ ಸೋಮಣ್ಣ “ಮರ್ಫಿ” ಚಿತ್ರದ ನಿರ್ಮಾಪಕರಾಗಿದ್ದಾರೆ. ಜನವರಿ 14, 2021 ರಿಂದ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಯೋಜನೆ ಸಿದ್ದವಾಗಿದೆ.

ಇನ್ನು ನಟ ಮಂಡ್ಕೂರ್ ಹಾಗೂ ನಿರ್ದೇಶಕರ ನಡುವೆ ಇದು ನಾಲ್ಕನೇ ಸಹಯೋಗವಾಗಿದ್ದು ಮೊದಲು “ಊರ್ವಿ”ಗಾಗಿ ಈ ಇಬ್ಬರೂ ಒಟ್ಟಾಗಿದ್ದರು. ಅದು ಅವರ ಚೊಚ್ಚಲ ಚಿತ್ರವಾಗಿತ್ತು. ಸುಮನ್ ನಗರ್ ಕರ್ ಹಾಗೂ ಅನುಷಾ ಶಂಕರ್ ನಟನೆಯ “ಬ್ರಾಹ್ಮಿ” ಸಹ ಇವರ ಸಂಯೋಜನೆಯ ಚಿತ್ರವಾಗಿದ್ದು ಈ ಚಿತ್ರದ ನಂತರ ನೆಟ್ ಫ್ಲಿಕ್ಸ್ ನಲ್ಲಿ ತೆರೆ ಕಾಣುತ್ತಿರುವ “ದಿ ಫಾಲನ್” ನಲ್ಲಿ ಸಹ ಈ ನಿರ್ದೇಶಕ-ನಟರ ಜೋಡಿ ಒಂದಾಗಿತ್ತು. ಇದೀಗ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. “ಮರ್ಫಿ” ಅವರ ನಾಲ್ಕನೇ ಯೋಜನೆಯಾಗಿದೆ. ತಂಡದಲ್ಲಿ ಅಕಿರಾ ಮತ್ತು ರಿಲ್ಯಾಕ್ಸ್ ಸತ್ಯ ಅವರಂತಹ ಚಿತ್ರಗಳ ನಿರ್ದೇಶಕರಾದ ನವೀನ್ ರೆಡ್ಡಿ ಸಹ ಇದ್ದಾರೆ. ಅವರು ಈ ಚಿತ್ರಕ್ಕಾಗಿ ಸಂಭಾಷಣೆ ಬರೆದಿದ್ದಾರೆ.

No Comments

Leave A Comment