Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಅಮಾಸೆಬೈಲು: ಎರಡು ಲಾರಿಗಳಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ – ನಾಲ್ವರ ಬಂಧನ

ಕುಂದಾಪುರ:ಅಮಾಸೆಬೈಲ್ ಠಾಣಾ ವ್ಯಾಪ್ತಿಯಲ್ಲಿ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ 52 ಕೋಣಗಳನ್ನು ಸಾಗಟ ಮಾಡುವುದನ್ನು ಪತ್ತೆ ಹಚ್ಚಿಲಾಗಿದ್ದು, ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಚೆಕ್ ಪೋಸ್ಟ್‌ನಲ್ಲಿ ಎರಡು ಲಾರಿಗಳನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು ಒಂದು ಲಾರಿಯಲ್ಲಿ 24 ಕೋಣಗಳನ್ನು ಹಾಗೂ ಇನ್ನೊಂದು ಲಾರಿಯಲ್ಲಿ 28 ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ.

ಈ ಅಕ್ರಮ ಜಾಣುವಾರುಗಳನ್ನು ಮೂಡುಬಿದ್ರೆಯ ಬೆಳುವಾಯಿ ಕಡೆಗೆ ಸಾಗಿಲಾಗುತ್ತಿದೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಎರಡು ಲಾರಿಗಳಲ್ಲಿ ಒಟ್ಟು 52 ಜಾನುವಾರುಗಳ ರಕ್ಷಣೆ ಮಾಡಲಾಗಿದ್ದು, ಆರೋಪಿಗಳಾದ ದಾವಣಗೆರೆಯ ಮೆಹಬೂಬ್ ಮತ್ತು ಇಮ್ರಾನ್, ಬೈಲಹೊಂಗಲದ ಬಾಪು ಸಾಹೇಬ್, ಅಸಿಫ್ ಬಂಧಿತ ಆರೋಪಿಗಳು. ಅಮಾಸೆಬೈಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

No Comments

Leave A Comment