Log In
BREAKING NEWS >
ಉಡುಪಿ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ಗ್ರಾಮೀಣ ಉತ್ಪನ್ನಗಳ ಮೇಳಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ....ಪರ್ಯಾಯ ಪ೦ಚಶತಮಾನೋತ್ಸವಕ್ಕೆ ಅದ್ದೂರಿಯ ಚಾಲನೆ-ಗಣ್ಯರಿಗೆ ಸನ್ಮಾನ..ದಿನಕ್ಕೊ೦ದು ಭಾಗವತಾಮೃತ ಬಿ೦ದುಗಳು-ರಾಮಸ೦ದೇಶ ಪ್ರಸ್ತಕ ಅನಾವರಣ... ಜ 18ಕ್ಕೆ ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ

ಸ್ಯಾಂಡಲ್​ ವುಡ್​ ಡ್ರಗ್ ಕೇಸ್: ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಡ್ರಗ್​ ಪ್ರಕರಣದ ಆರನೇ ಆರೋಪಿಯಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ಮನೆಯ ಮೇಲೆ ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಸರ್ಚ್​ ವಾರೆಂಟ್ ಪಡೆದು ಹೆಬ್ಬಾಳದ ಬಳಿ ಇರುವ ಆದಿತ್ಯ ಆಳ್ವ ಅವರ ‘ಹೌಸ್ ಆಫ್​ ಲೈಫ್’ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ದಾಖಲೆಗಳಿಗೆ ಹುಡುಕಾಟ ನಡೆಸಿದ್ದಾರೆ.

ರಾಗಿಣಿಯ ಬಂಧನವಾದ ಕೂಡಲೆ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಆತ ಪತ್ತೆಯಾಗಿರಲಿಲ್ಲ. ಇಂದು ಆತನ ಮನೆ ಮೇಲೆ ಇನ್​ಸ್ಪೆಕ್ಟರ್​ ಪುನೀತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಹೆಬ್ಬಾಳ ಸಮೀಪದ ಆದಿತ್ಯ ಆಳ್ವ ಅವರ ಮನೆ ಸುಮಾರು‌ 4 ಎಕರೆ ವಿಸ್ತೀರ್ಣದಲ್ಲಿದೆ. ಮನೆಯ ಆವರಣದಲ್ಲಿಯೇ ರೆಸಾರ್ಟ್ ಸಹ ಇದೆ. ಸದ್ಯ ಇನ್​ಸ್ಪೆಕ್ಟರ್​ ಪುನೀತ್ ತಂಡದಿಂದ ಮನೆಯ ಶೋಧ ನಡೆಸಲಾಗುತ್ತಿದೆ.

ಸದ್ಯಕ್ಕೆ ಮನೆಯಲ್ಲಿ ಕೆಲಸಗಾರರು ಬಿಟ್ಟರೆ ಉಳಿದವರು ಯಾರೂ ಇಲ್ಲ. ಸಾಕಷ್ಟು ಪಾರ್ಟಿಗಳು ಇಲ್ಲಿಯೇ ನಡೆದಿರೋ ಸಾಧ್ಯತೆಯಿದೆ. ಪೊಲೀಸರಿಗೆ ಸಿಕ್ಕಿರೋ ಪಾರ್ಟಿಗಳ ಪೋಟೊಗಳು ಸಹ ಇಲ್ಲಿಯದ್ದೇ ಎನ್ನಲಾಗಿದೆ.

No Comments

Leave A Comment