Log In
BREAKING NEWS >
ಶ್ರೀಕೃಷ್ಣಮಠದ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಕೆ-ಗದ್ದಲವೆಬ್ಬಿಸಿದ ಪೆರ೦ಪಳ್ಳಿಗೆ ತೀವ್ರ ಮುಖಭ೦ಗ........ಡಿ.6ಕ್ಕೆ ಪಲಿಮಾರು ಶ್ರೀಗಳ ಸ೦ಚಾರ ಆರ೦ಭ, ತಿರುಪತಿ ಸೇರಿದ೦ತೆ ಇತರ ಪುಣ್ಯಕ್ಷೇತ್ರಕ್ಕೆ ಭೇಟಿ ಘಣಿಕ ಚಾಲದವರೆಗೆ-ಡಿ,24ಕ್ಕೆ ಉಡುಪಿಗೆರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ದಂಡ ಪಾವತಿಸಿದರೆ ಮುಂದಿನ ವರ್ಷ ಜನವರಿ 27ಕ್ಕೆ ಶಶಿಕಲಾ ಜೈಲಿಂದ ರಿಲೀಸ್: ಆರ್‌ಟಿಐ ಪ್ರಶ್ನೆಗೆ ಜೈಲು ಇಲಾಖೆ ಉತ್ತರ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಹವರ್ತಿ  ವಿ ಕೆ ಶಶಿಕಲಾ, ಮುಂದಿನ ವರ್ಷ  ಜನವರಿಯಲ್ಲಿ ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ,  ಅಕ್ರಮ ಆಸ್ತಿ ಪ್ರಕರಣದಲ್ಲಿ 2017ರಲ್ಲಿ ಶಶಿಕಲಾ ಅವರಿಗೆ ಜೈಲುಶಿಕ್ಷೆಯಾಗಿತ್ತು. ಒಂದೊಮ್ಮೆ ಆಕೆ ತನ್ನ ಮೇಲೆ ವಿಧಿಸಲಾಗಿರುವ ದಂಡದ ಮೊತ್ತ ಪಾವತಿಸಿದ್ದಾದರೆ 2021ಜನವರಿ 27ಕ್ಕೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ,. ಹಾಗೊಮ್ಮೆ ದಂಡ ಪಾವತಿಸಲು ವಿಫಲವಾಗಿದ್ದರೆ 2022 ಫೆಬ್ರವರಿ 27 ರವರೆಗೆ ಇನ್ನೂ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಿದೆ.

ಆರ್‌ಟಿಐ ಕಾಯ್ದೆ ಅಡಿಯಲ್ಲಿ ಕೇಳಲಾಗಿದ್ದ ಮಾಹಿತಿಗೆ ಬೆಂಗಳೂರು ಸೆಂಟ್ರಲ್ ಜೈಲಿನ ಸಾರ್ವಜನಿಕ ಮಾಹಿತಿ ವಿಭಾಗದ  ಅಧೀಕ್ಷಕಿ ಆರ್.  ಲತಾ ಈ ಮಾಹಿತಿ ನೀಡಿದ್ದಾರೆ. ಜೈಲು ದಾಖಲೆಗಳ ಪ್ರಕಾರ ಖೈದಿ ಸಂಖ್ಯೆ  9234 ಶಶಿಕಲಾ ‘ಬಿಡುಗಡೆಯ ಸಂಭವನೀಯ ದಿನಾಂಕ’ ಜನವರಿ 27, 2021 ಆಗಿದೆ. ಇದು ಆಕೆಯು ನ್ಯಾಯಾಲಯ ವಿಧಿಸಿದ ದಂಡದ ಮೊತ್ತ ಪಾವತಿಸಿದ್ದರೆ ಮಾತ್ರ ಸಂಭವಿಸಲಿದೆ.

ಹಾಗಿಲ್ಲವಾದರೆ ಶಶಿಕಲಾ ಅವರ ‘ಬಿಡುಗಡೆಯ ದಿನಾಂಕ’ ಫೆಬ್ರವರಿ 27, 2022 ಆಗಲಿದೆ.” ಅವರು ಹೇಳಿದರು.

ಇದಲ್ಲದೆ ಶಶಿಕಲಾ ಒಂದೊಮ್ಮೆ  ಪೆರೋಲ್ ಸೌಲಭ್ಯ ಅನ್ನು ಬಳಸಿದರೆ ಬಿಡುಗಡೆಯ ದಿನಾಂಕ ಬದಲಾಗಬಹುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಸಧ್ಯ, ಶಶಿಕಲಾ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಫೆಬ್ರವರಿ 15, 2017 ರಿಂದ ಶಶಿಕಲಾ ಇದೇ ಜೈಲಿನಲ್ಲಿದ್ದಾರೆ. ಅವರನ್ನು ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಲಾಗಿದೆ. ಅಲ್ಲದೆ ನ್ಯಾಯಾಲಯ ನಾಲ್ಕು ವರ್ಷದ ಜೈಲುಶಿಕ್ಷೆಯೊಡನೆ 10 ಕೋಟಿ ರು. ದಂಡವನ್ನೂ ವಿಧಿಸಿದೆ.  ಇನ್ನು ಶಶಿಕಲಾ ಅವರ ಸೋದರಳಿಯ ಸುಧಾಕರನ್ ಮತ್ತು ಅವರ ಆಪ್ತ ಜೆ.ಇಳವರಸಿ ಸಹ ಇದೇ ಪ್ರಕ್ರಣದಲ್ಲಿ ಜೈಲು ಸೇರಿದ್ದಾರೆ.

ಶಶಿಕಲಾ ಅವರ ಬಿಡುಗಡೆ ದಿನಾಂಕದ ಕುರಿತು ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹಮೂರ್ತಿ  ಆರ್‌ಟಿಐ ಪ್ರಶ್ನೆಯನ್ನು ಕೇಳಿದ್ದರು.

No Comments

Leave A Comment