Log In
BREAKING NEWS >
ನ್ಯಾಯಾಲಯ ಲಸಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದ್ದಕ್ಕೆ ಸಿಟಿರವಿ,ಕೇ೦ದ್ರ ಸಚಿವ ಸದಾನ೦ದ ಗೌಡರ ವರ್ತನೆಗೆ ರಾಜ್ಯದ ಎಲ್ಲೆಡೆ ಭಾರೀ ಆಕ್ರೋಶ....

ಮದ್ಯ ಸೇವಿಸಿ ಯುವತಿಗೂ ಕುಡಿಸಿದ್ರು – ಅಪ್ರಾಪ್ತ ಸೇರಿ ಮೂವರಿಂದ ಗ್ಯಾಂಗ್‍ರೇಪ್

– 19ರ ಹುಡುಗಿಯ ಮುಂದೆಯೇ ಎಣ್ಣೆ ಪಾರ್ಟಿ- ಕುಡಿದ ನಂತ್ರ ಯುವತಿಯ ಮೇಲೆರಗಿದ ಕಾಮುಕರು

ಹೈದರಾಬಾದ್: 19 ವರ್ಷದ ಯುವತಿಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತ ಹುಡುಗ ಸೇರಿದಂತೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ರಂಗ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರಾಚಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆದಿಬಟ್ಲಾ ಗ್ರಾಮದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಈಗಾಗಲೇ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಸೆಪ್ಟೆಂಬರ್ 7 ರಂದು ಸಂತ್ರಸ್ತೆ ತನ್ನ ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದಳು. ಸ್ನೇಹಿತರನ್ನು ಭೇಟಿಯಾದ ನಂತರ ವಾಪಸ್ ಮನೆಗೆ ಹಿಂದಿರುಗುತ್ತಿದ್ದಳು. ಬಾಲಾಪುರದಲ್ಲಿ ಸಂತ್ರಸ್ತೆ ಆಟೋ ಹತ್ತಿದ್ದಾಳೆ. ಈ ವೇಳೆ ಇಬ್ಬರು ಆರೋಪಿಗಳು ಸಹ ಅದೇ ಆಟೋವನ್ನು ಹತ್ತಿದ್ದು, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು. ಕೊನೆಗೆ ಬಲವಂತವಾಗಿ ಆಕೆಯನ್ನು ಆಟೋದಿಂದ ಕೆಳಗಿಸಿ ಬೈಕಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು.

ಸಂತ್ರಸ್ತೆಯನ್ನು ಅಲ್ಲಿಗೆ ಕರೆದುಕೊಂಡು ಹೋದ ಸ್ವಲ್ಪ ಸಮಯದ ನಂತರ ಅಪ್ರಾಪ್ತ ಹುಡುಗ ಬಂದಿದ್ದಾನೆ. ನಂತರ ಮೂವರು ಕುಳಿತುಕೊಂಡು ಮದ್ಯ ಸೇವಿಸಿದ್ದಾರೆ.

ನಂತರ ಸಂತ್ರಸ್ತೆಗೂ ಒತ್ತಾಯ ಮಾಡಿ ಮದ್ಯ ಕುಡಿಸಿದ್ದಾರೆ. ಬಳಿಕ ಸಂತ್ರಸ್ತೆಯ ಮೇಲೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂತ್ರಸ್ತೆ ತಾಯಿಯೊಂದಿಗೆ ರಾಚಕೊಂಡ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಕೂಡಲೇ ಪೊಲೀಸರು ಈ ಕುರಿತು ಕ್ರಮಗೊಂಡು ಆರೋಪಿಗಳ ಬಂಧನಕ್ಕಾಗಿ ಒಂದು ತಂಡವನ್ನು ರಚಿಸಿದ್ದರು
ನಂತರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಾಪರಾಧಿ ಮೀರ್‌‌‌‌ಪೇಟೆ ಮೂಲದವನಾಗಿದ್ದು, ಉಳಿದ ಇಬ್ಬರು ಬಾಲಾಪುರದವರಾಗಿದ್ದು, ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಆರೋಪಿಗಳ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

No Comments

Leave A Comment