ಉಸಿರಾಟದ ಸಮಸ್ಯೆಯಿಂದ ಮತ್ತೆ ಏಮ್ಸ್ ಗೆ ದಾಖಲಾದ ಗೃಹ ಸಚಿವ ಅಮಿತ್ ಶಾ ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಕಾರಣದಿಂದ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಅಮಿತ್ ಶಾ ಅವರು ಏಮ್ಸ್ ನ ಕಾರ್ಡಿಯೋ ನ್ಯೂರೋ ಟವರ್ ನಲ್ಲಿ ದಾಖಲಾಗಿದ್ದಾರೆ. 40 ದಿನಗಳ ಅಂತರದಲ್ಲಿ ಮೂರನೇ ಬಾರಿ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ನಿಂದ ಗುಣಮುಖರಾದ ನಂತರ ಅಮಿತ್ ಶಾ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಈ ಕಾರಣದಿಂದ ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಕಳೆದ ಆಗಸ್ಟ್ ಎರಡರಂದು ಕೋವಿಡ್ -19 ಪಾಸಿಟಿವ್ ಆದ ಕಾರಣ ಅಮಿತ್ ಶಾ ಅವರು ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ನೆಗೆಟಿವ್ ವರದಿಯಾದ ಕಾರಣ ಆಗಸ್ಟ್ 14ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ಹೋಮ್ ಐಸೋಲೇಶನ್ ನಲ್ಲಿದ್ದರು. Share this:TweetWhatsAppEmailPrintTelegram