
ಸುಶಾಂತ್ ಜೊತೆ ಸಾರಾ ಅಲಿಖಾನ್ -ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಸೇವಿಸುತ್ತಿದ್ದರು: ರಿಯಾ ಚಕ್ರವರ್ತಿ
ಮುಂಬಯಿ: ಡ್ರಗ್ಸ್ ಜಾಲದಲ್ಲಿ ಅನೇಕರ ಹೆಸರುಗಳು ಹೊರಬರುತ್ತಿವೆ. ಸದ್ಯ ರಿಯಾ ಚಕ್ರವರ್ತಿ, ಅವರ ಸಹೋದರ ಶೋವಿಕ್ ಚಕ್ರವರ್ತಿ ಎನ್ಸಿಬಿ ಅಧಿಕಾರಿಗಳ ವಿಚಾರಣೆಗೆ ಒಳಪಡುತ್ತಿದ್ದಾರೆ. ಈ ಜಾಲದಲ್ಲಿ ಅನೇಕರ ಹೆಸರುಗಳು ಹೊರಬರುತ್ತಿವೆ.
ಸುಮಾರು 20 ಪುಟಗಳ ಹೇಳಿಕೆಯನ್ನು ರಿಯಾ ಅವರಿಂದ ಎನ್ಸಿಬಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ಬಾಲಿವುಡ್ನ ಅನೇಕ ಟಾಪ್ ಸೆಲೆಬ್ರಿಟಿಗಳ ಹೆಸರು ಹೊರಬಂದಿದೆ. ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ಸೇವಿಸುತ್ತಾರೆ ಎಂದು ರಿಯಾ ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.