Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಬೈಕಿನಲ್ಲಿ ಜಲಾವೃತಗೊಂಡ ಸೇತುವೆ ದಾಟುವ ಸಾಹಸ ಮಾಡಿ ನೀರು ಪಾಲಾದ ಯುವಕ

ಮಹಾಲಿಂಗಪುರ: ಘಟಪ್ರಭಾ ನದಿಯ ನಂದಗಾಂವ-ಅವರಾದಿ ಸೇತುವೆಯನ್ನು ಬೈಕ್‌ ಮೇಲೆ ದಾಟುವಾಗ ಯುವಕ ಘಟಪ್ರಭಾ ನದಿ ಪಾಲಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಸದಾಶಿವ ಹಂಚಿನಾಳ(16) ನೀರು ಪಾಲಾದ ಯುವಕ. ಘಟಪ್ರಭಾ ನದಿಗೆ ಪ್ರವಾಹ ಬಂದು ಕಳೆದ 3 ದಿನಗಳಿಂದ ನಂದಗಾಂವ-ಅವರಾದಿ, ಮಿರ್ಜಿ-ಅಕ್ಕಿಮರಡಿ ಸೇತುವೆಗಳು ಜಲಾವೃತವಾಗಿವೆ. ಶುಕ್ರವಾರ ಸಂಜೆ ಯುವಕ ಮತ್ತು ಆತನ ಸ್ನೇಹಿತ ಸೇರಿ ಘಟಪ್ರಭಾ ನದಿಯ ಸೇತುವೆ ಮೇಲೆ ಒಂದೂವರೆ ಅಡಿ ನೀರು ಹರಿಯುತ್ತಿದ್ದರೂ ಅವರಾದಿ ಕಡೆಯಿಂದ ನಂದಗಾಂವ ಕಡೆಗೆ ಬೈಕ್‌ ಮೇಲೆ ನದಿ ದಾಟುವ ಸಾಹಸ ಮಾಡಿದ್ದಾರೆ.

ನೀರು ರಭಸವಾಗಿ ಹರಿಯುತ್ತಿರುವ ಕಾರಣ ಸೇತುವೆ ಅರ್ಧ ದಾಟುವುದರಲ್ಲಿ ಬೈಕ್‌ ಸಮೇತ ಇಬ್ಬರು ನೀರು ಪಾಲಾಗಿದ್ದರು. ಬೈಕ್‌ ಹಿಂದಿನ ಸವಾರ ಈಜಿ ಪಾರಾಗಿದ್ದು, ಬೈಕ್‌ ಓಡಿಸುತ್ತಿದ್ದ ಯುವಕ ನದಿ ಪಾಲಾಗಿದ್ದಾನೆ. ಯುವಕನ ದೇಹ ಹಾಗೂ ಬೈಕ್‌ ಇನ್ನೂ ಪತ್ತೆಯಾಗಿಲ್ಲ ಮೂಡಲಗಿ ತಾಲೂಕಿನ ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No Comments

Leave A Comment