Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಕಾಂಗ್ರೆಸ್ ಮುಖಂಡ ಯುವ ಉದ್ಯಮಿ ದುರ್ಗಾದಾಸ್ ಶೆಟ್ಟಿನಿಧನ

ಉಡುಪಿ ಯುವಉದ್ಯಮಿ ಶಿರಿಬೀಡುವಿನ ದುರ್ಗಾದಾಸ್ ಶೆಟ್ಟಿ,(57)ಯವರು ಸ್ವಗ್ರಹದಲ್ಲಿ ಹೃದಯಘಾತದಿಂದ ಸೆ,11 ಬೆಳಗಿನ ಜಾವ ನಿಧನರಾದರು.ಮೃತರು ಕೊಡುಗೈ ದಾನಿಯಾಗಿದ್ಧಅವರು ಉಡುಪಿ ಶಿರಿಬೀಡು ವಾರ್ಡಿನಲ್ಲಿ ಕಾಂಗ್ರೆಸ್ ಪರ ಅಭ್ಯರ್ಥಿಯಾಗಿದ್ದು ಅಲ್ಪಮತದ ಅಂತರದಿಂದ ಪರಾಜಯಗೊಂಡಿದ್ದರು. ಉಡುಪಿ ಮಾರುತಿ ವೀಥೀಕಾದ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದರು.

ಈ ಹಿಂದೆ ಮುಂಬೈಯ ಪ್ರಸಿದ್ಧ ಹಿಂದಿ, ಚಲನಚಿತ್ರದಗಾಯಕರು ಚಲನಚಿತ್ರ ನಟರನ್ನು ಕರೆಸಿ, ಸ್ಟಾರ್ ನೈಟ್ ಸಂಗೀತ ಕಾರ್ಯಕ್ರಮವನ್ನು ಉಡುಪಿಯಲ್ಲಿ ಯಶಸ್ವಿಯಾಗಿ ನಡೆಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು, ಉಡುಪಿಯ ಅಷ್ಟಮಿಯಂದು ಹುಲಿ ವೇಷ ತಂಡದವರನ್ನು ಪ್ರತಿವರ್ಷ ಪ್ರೋತ್ಸಾಹಿಸುತ್ತಿದ್ಧವರಲ್ಲಿ ಎತ್ತಿದ ಕೈ, ಎನಿಸಿದ್ದರು. ಮೃತರು ಪತ್ನಿ, ಇಬ್ಬರು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ,

No Comments

Leave A Comment