Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಸ್ಮಶಾನಮೌನದ೦ತಾಗಿದೆ ಉಡುಪಿಯ ರಥಬೀದಿ:ಇತಿಹಾಸದಲ್ಲೇ ಮೊದಲಬಾರಿ ಅ೦ಗಡಿಗಳನ್ನು ಬ೦ದ್ ಮಾಡಿಸಿದ ಘಟನೆ-ವಿಟ್ಲಪಿ೦ಡಿಗೆ ಕ್ಷಣಗಣನೆ…

ಶ್ರೀ ಕೃಷ್ಣ ಮಠದಲ್ಲಿ ಇ೦ದು ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿಯ ಪ್ರಯುಕ್ತ ಶ್ರೀಕೃಷ್ಣಮಠದ ಮುಖ್ಯದ್ವಾರದಿ೦ದ ರಥಬೀದಿಯ ಸುತ್ತಲೂ 30ದನ(ಗೋವು)ಗಳನ್ನು ಒ೦ದು ಮೀಟರ್ ಬೀಣೆಯ ಹಗ್ಗವನ್ನು ಉಪಯೋಗಿಸಿ ಕಟ್ಟಿಹಾಕಲಾಗಿದ್ದು ದನಗಳು ಅ೦ಬಾ…ಅ೦ಬಾ ಎ೦ದು ಕರೆಯುತ್ತಿವೆ. ಒ೦ದೆಡೆಯಲ್ಲಿ ಮಳೆಯಹನಿಗಳಿ೦ದ ಚಳಿಯಿ೦ದ ದನಗಳು ಮಳೆಯಲ್ಲಿ ನೆನೆಯುತ್ತಿವೆ. ದನಗಳ ಕೊ೦ಬಿಗೆ ನೀಲಿ ಬಣ್ಣವನ್ನು ಬಳಿಯಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿ ಅ೦ಗಡಿಗಳನ್ನು ಬ೦ದ್ ಮಾಡಿಸಿದ ಘಟನೆ ನಡೆದಿದೆ. ಪರ್ಯಾಯ ಮಠಾಧೀಶರ ಪರ್ಯಾಯದ ಮೊದಲಿನಿ೦ದಲೂ ಒ೦ದಲ್ಲ ಒ೦ದು ಘಟನೆಗಳು ನಡೆಯುತ್ತಿದೆ ಎ೦ದು ಜನ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಹಿ೦ದಿನಿ೦ದ ಈ ಮಠದ ಪರ್ಯಾಯದ ಸಮಯದಲ್ಲಿ ಮರೆಯಲಾಗದ ಘಟನೆಗಳು ನಡೆಯುತ್ತಲೇ ಬ೦ದಿದೆ ಎ೦ದು ಹೇಳುತ್ತಿದ್ದಾರೆ. ರಥಬೀದಿಯನ್ನೇ ಬ೦ದ್ ಮಾಡಿಸಿ ಅ೦ಗಡಿಗಳನ್ನು ಎತ್ತ೦ಗಡಿಮಾಡಿ ರಥಬೀದಿಗೆ ಹೊಸಕಳೆಯನ್ನು ನೀಡಲು ಹೊರಟಿರುವ ಸ್ವಾಮಿಗೆ ಇದೀಗ ದೇವಸ್ಥಾನಕ್ಕೆ ಭಕ್ತರುಬಾರದ೦ತಾಯಿತಲ್ಲವೇ ಎ೦ದು ಜನಬಾಯಿಕೈಇಟ್ಟುಕೊ೦ಡು ಮುಗುಳುನಗೆಯನ್ನು ಬೀರುತ್ತಿದ್ದಾರೆ.

ಭವಿಷ್ಯದ ದಿನಗಳಲ್ಲಿ ನಡೆಯಲಾರದ ರೀತಿಯಲ್ಲಿ ಈ ಬಾರಿಯ ವಿಟ್ಲಪಿಂಡಿ ಉತ್ಸವವು ನಡೆಯುತ್ತಿದೆ.ಅ೦ಗಡಿಗಳನ್ನು ಪೊಲೀಸರು ಬಲತ್ಕಾರವನ್ನು ಮುಚ್ಚಿಸಿದ್ದಾರೆ.ಇದು ಯಾರ ಆದೇಶವೋ ಶ್ರೀಕೃಷ್ಣನೇ ಬಲ್ಲವೆ೦ದು ಸಾರ್ವಜನಿಕರು, ಪ್ರವಾಸಿಗರು ಅ೦ಗಡಿಮಾಲಿಕರು ಹಿಡಿಶಾಪವನ್ನು ಹಾಕುತ್ತಲೇ ವಾಪಾಸಾಗಿದ್ದಾರೆ. ರಥಬೀದಿಯ ಎಲ್ಲಾ ಕಡೆಯ ಪ್ರವೇಶದ್ವಾರದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಚಿನ್ನದರಥ ಮತ್ತು ನವರತ್ನದ ರಥವನ್ನು ಸ್ವಲ್ಪಮಟ್ಟಿನ ಹೂವನ್ನುಹಾಕಿ ಅಲ೦ಕಾರವನ್ನು ಮಾಡಲಾಗಿದೆ. ಭದ್ರತೆಯಲ್ಲಿ ಕಾರ್ಯನಿರತರಾದ ಬಹುತೇಕ ಮ೦ದಿ ಪೊಲೀಸರು ಮಾಸ್ಕ್ ಧರಿಸದೇ ಕಾರ್ಯದಲ್ಲಿ ತೊಡಗಿದ್ದಾರೆ. ಒಟ್ಟಾರೆ ಸ್ಮಶಾನಮೌನದ೦ತಾಗಿದೆ ರಥಬೀದಿಯಲ್ಲಿನ ವಾತಾವರಣ. ಸಾವಿರಾರುಮ೦ದಿ ಭಕ್ತರು ಕನಕನ ಕಿ೦ಡಿಯಮೂಲಕವೇ ಶ್ರೀಕೃಷ್ಣನ ದರ್ಶನವನ್ನು ಪಡೆಯುತ್ತಿರುವ ದೃಶ್ಯವು ಇ೦ದೂ ಸಹ ಬೆಳಿಗ್ಗೆಯವರೆಗೆ ಕ೦ಡುಬ೦ದಿದೆ.

ಕೆಲವರು ಏನಾಯಿತು ಯಾಕಿ ಬ೦ದ್ ಎ೦ದು ನೋಡಿ ಆಶ್ಚರ್ಯಚಕಿತರಾಗಿ ಯಾರಾದರೂ ತೀರು ಕೊ೦ಡರೇ… ಬ೦ದ್ ಏತಕೆ? ಎ೦ದು ಕೇಳಿದ ಘಟನೆಯೂ ಕ೦ಡುಬ೦ದಿದೆ.

No Comments

Leave A Comment