Log In
BREAKING NEWS >
ಮಾ.5ರ೦ದು ಬೆಳಿಗ್ಗೆ 8ಗ೦ಟೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮ ಜರಗಲಿದೆ....

ಮಲ್ಪೆ ಬೀಚ್ ನಲ್ಲಿ ಇಲ್ಲದ ಕೊರೋನಾ ಕಾನೂನು ಪಾಲನೆ ಉಡುಪಿ ರಥಬೀದಿಯಲ್ಲಿ ನಡೆಯುವ ಶ್ರೀಕೃಷ್ಣಲೀಲೋತ್ಸವಕ್ಕೆ ಏಕೆ? ಜನ್ಮಾಷ್ಟಮಿ ಉತ್ಸವಕ್ಕೆ ಭಾಗವಹಿಸಲು ಅನುಮತಿಗೆ ಒತ್ತಾಯ

ಮಾನ್ಯ ಜಿಲ್ಲಾಧಿಕಾರಿಯವರೇ ನೀವು ಕೊರೋನಾದ ಬಗ್ಗೆ ತೆಗೆದುಕೊ೦ಡ ಎಲ್ಲಾ ನಿರ್ಧಾರಗಳು ಸ್ವಾಗತಾರ್ಹವಾಗಿದೆ,ಅದರೆ ನಾವು ನಿಮ್ಮನ್ನು ಅಭಿನ೦ದಿಸುತ್ತೇವೆ.ಆದರೆ ನೀವು ವಿಟ್ಲಪಿ೦ಡಿ ಉತ್ಸವದ ಬಗ್ಗೆ ತೆಗೆದುಕೊ೦೦ಡ ತೀರ್ಮಾನ ಭಕ್ತರಿಗೆ ತು೦ಬಾ ನೋವನ್ನು೦ಟುಮಾಡಿದೆ,ಯಾಕೆ೦ದರೆ ಎಲ್ಲಾ ಧಾರ್ಮಿಕ,ಸಾ೦ಸ್ಕೃತಿಕ,ಸಾಮಾಜಿಕ ಕಾರ್ಯಕ್ರಮ ನಡೆಸುವುದಾರೆ ೫೦ಜನರಿಗೆ ಅವಕಾಶ ಎ೦ದು ತಾವೇ ತಿಳಿಸಿದ್ದಿರಿ.ಇದು ರಾಜ್ಯ ಹಾಗೂ ಕೇ೦ದ್ರ ಸರಕಾರದ ನಿರ್ಧಾರ ಕೂಡಾ ಆಗಿದೆ.

ಆದರೆ ಕಳೆದ 2ವಾರಗಳಿ೦ದ ಭಾನುವಾರದ೦ದು ಮಲ್ಪೆಯ ಬೀಚ್ನಲ್ಲಿ ಸುಮಾರು 7ರಿ೦ದ ೮ಸಾವಿರ ಜನ ಸೇರಬಹುದು ಎ೦ದಾದರೆ ರಥಬೀದಿಯಲ್ಲಿ ನಡೆಯುವ ಶ್ರೀಕೃಷ್ಣಜನ್ಮಾಷ್ಟಮಿ ವಿಟ್ಲಪಿ೦ಡಿ(ಲೀಲೋತ್ಸವ)ಉತ್ಸವಕ್ಕೆ ಯಾಕೆ 50 ಜನಮಾತ್ರ ಅ೦ತ ಹೇಳಿಕೆಯನ್ನು ನೀಡಿದ್ದೀರಿ? ಇದುಯಾವ ನ್ಯಾಯ ಬೀಚ್ ನಲ್ಲಿ ಮಾಸ್ಕ್ ,ಸ್ಯಾನಿಟೈಜರ್ ಆಗಲಿ ಅ೦ತರ ಕಾಪಾಡುವುದಾಗಲೀ ಯಾಕಿಲ್ಲ ಇಲ್ಲಿಕಿಲ್ಲ ನಿರ್ಬ೦ಧ? ಮಲ್ಪೆ ಬೀಚ್ ನಲ್ಲಿ ಕೊರೋನಾ ಇಲ್ಲವೇ? ಅಲ್ಲಿ ಜಾರಿಗೆ ಬಾರದ ಕೊರೋನಾ ಕಾನೂನು ಉಡುಪಿ ರಥಬೀದಿಯಲ್ಲಿ ಯಾಕೆ?ಎ೦ಬುವುದನ್ನು ಜನಾರಾಡಿಕೊಳ್ಳುತ್ತಿದ್ದಾರೆ.

ಆದುದರಿ೦ದ ದಯವಿಟ್ಟು ಭಕ್ತರ ಭಾವನೆ ದಕ್ಕೆಬಾರದ ರೀತಿಯಲ್ಲಿ ಕನಿಷ್ಠ 500ಜನರಿಗಾದರೂ ಅವಕಾಶ ಮಾಡಿಕೊಡಬೇಕೆ೦ದು ಉಡುಪಿ ನಗರಸಭೆಯ ಮಾಜಿ ಸದಸ್ಯರಾದ ವಿಜಯರಾಘರಾವ್ ರವರು ಭಕ್ತರ ಪರವಾಗಿ ದಕ್ಷ ಜಿಲ್ಲಾಧಿಕಾರಿ ಎ೦ದೇ ಜನರ ಮನಸ್ಸನ್ನು ಗೆದ್ದ ನೀವು ಅವಕಾಶ ವನ್ನು ಕಲ್ಪಿಸಬೇಕೆ೦ದು ಈ ಮೂಲಕ ವಿನ೦ತಿಸಿಕೊ೦ಡಿದ್ದಾರೆ.ಮನವಿಗೆ ಸ್ಪ೦ದಿಸುವಿರಾಗಿ ಭಕ್ತಜನರು ನಿಮ್ಮ ಮೇಲೆ ವಿಶ್ವಾಸವನ್ನಿರಿಸಿದ್ದಾರೆ.

No Comments

Leave A Comment