Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

ಮುಂಬೈಗೆ ಹೊರಟ ನಟಿ ಕಂಗನಾಗೆ ಮಹಾನಗರ ಪಾಲಿಕೆ ಶಾಕ್:ಬಂಗಲೆಯ ಒಂದು ಭಾಗ ನೆಲಸಮ, ಹೈಕೋರ್ಟ್ ಮೊರೆ ಹೋದ ನಟಿ

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ.

ಇಂದು ಬೆಳಗ್ಗೆ ಮುಂಬೈ ಮಹಾನಗರ ಪಾಲಿಕೆ ನಟಿಗೆ ಆಘಾತವನ್ನುಂಟುಮಾಡಿದ್ದು ಮುಂಬೈ ಮಹಾನಗರದಲ್ಲಿರುವ ಕಂಗನಾ ಬಂಗಲೆ ನಿರ್ಮಿಸುವಾಗ ಅಕ್ರಮ ನಡೆದಿದೆ ಎಂದು ಜೆಸಿಬಿ ಮೂಲಕ ಕಟ್ಟಡವನ್ನು ನೆಲಸಮ ಮಾಡುವ ಕಾರ್ಯ ಮಾಡಿದೆ. ಇಂದು ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದು ಬಂಗಲೆಯನ್ನು ವಿಸ್ತರಿಸಿ ಕಟ್ಟುವಾಗ ಅಕ್ರಮ ನಡೆದಿದೆ ಎಂದು ಆರೋಪಿಸಿದೆ.

ಈ ಬಗ್ಗೆ ಕಂಗನಾ ರಾನಾವತ್ ಅವರ ಪರ ವಕೀಲ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದು ಇಂದು ಬೆಳಗ್ಗೆ ತುರ್ತು ವಿಚಾರಣೆಗೆ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಬಿಎಂಸಿಯ ಧ್ವಂಸ ಕಾರ್ಯಾಚರಣೆಗೆ ಮಧ್ಯಂತರ ತಡೆ ತರಬೇಕೆಂದು ಕೋರಿದ್ದೇವೆ ಎಂದರು.

ಇಂದು ಅಪರಾಹ್ನ ಮುಂಬೈ ಹೈಕೋರ್ಟ್ ಕಂಗನಾ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸುವ ಸಾಧ್ಯತೆಯಿದೆ.
ಶಿವಸೇನೆ  ನಾಯಕರ ಜೊತೆ ತಾವು ಸೈದ್ಧಾಂತಿಕ ಭಿನ್ನತೆ ಹೊಂದಿರುವುದಕ್ಕೆ ಮಹಾರಾಷ್ಟ್ರ ಸರ್ಕಾರ ತಮ್ಮನ್ನು ಗುರಿಯಾಗಿಟ್ಟುಕೊಂಡು ಈ ಕೆಲಸ ಮಾಡುತ್ತಿದೆ ಎಂದು 33 ವರ್ಷದ ನಟಿ ಕಂಗನಾ ಆರೋಪಿಸಿದ್ದಾರೆ.

No Comments

Leave A Comment