Log In
BREAKING NEWS >
ಮಾ.5ರ೦ದು ಬೆಳಿಗ್ಗೆ 8ಗ೦ಟೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮ ಜರಗಲಿದೆ....

ಬಾತ್‌ರೂಂನ ಸೀಲಿಂಗ್ ನಲ್ಲಿ ನೇಣು ಬಿಗಿದುಕೊಂಡು ಖ್ಯಾತ ಕಿರುತೆರೆ ನಟಿ ಶ್ರಾವಣಿ ಕೊಂಡಪಳ್ಳಿ ಆತ್ಮಹತ್ಯೆ

ಹೈದರಾಬಾದ್: ತೆಲುಗಿನ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಅವರು ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟಿ ಶ್ರಾವಣಿ ಕೊಂಡಪಲ್ಲಿ ಅವರು ಹೈದರಾಬಾದ್‌ನ ಮಧುರನಗರದಲ್ಲಿರುವ ತನ್ನ ನಿವಾಸದಲ್ಲಿ ಬಾತ್‌ರೂಂನ ಸೀಲಿಂಗ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.

ಏತನ್ಮಧ್ಯೆ, ಗೆಳೆಯ ದೇವರಾಜ್ ರೆಡ್ಡಿ ಕಿರುಕುಳ ನೀಡುವುದರಿಂದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶ್ರಾವಣಿಯ ಕುಟುಂಬ ಆರೋಪಿಸಿದೆ. ಸದ್ಯ ದೇವರಾಜ್ ವಿರುದ್ಧ ಎಸ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ಮೂಲದ ದೇವರಾಜ್ ಅವರು ಶ್ರಾವಣಿಗೆ ಕಳೆದ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ನಟಿ ಕುಟುಂಬಸ್ಥರ ಆರೋಪವಾಗಿದೆ.

ಶ್ರಾವಣಿ ಕಳೆದ 8 ವರ್ಷಗಳಿಂದ ತೆಲುಗು ಟಿವಿ ಉದ್ಯಮದಲ್ಲಿ ಸಕ್ರಿಯರಾಗಿದ್ದರು. ಜನಪ್ರಿಯ ತೆಲುಗು ಧಾರಾವಾಹಿಗಳಾದ ಮನಸು ಮಮಥಾ ಮತ್ತು ಮೌನರಾಗಂ ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು .

No Comments

Leave A Comment