Log In
BREAKING NEWS >
ಮುಖ್ಯಮ೦ತ್ರಿಗಳಿ೦ದ "ವಿಶ್ವಪಥ" ನೂತನ ದರ್ಶನ ದಾರಿಯ ಉದ್ಘಾಟನೆ......ಪರ್ಯಾಯ ಪ೦ಚಶತಮಾನೋತ್ಸವ-ಪರ್ಯಾಯದ ಮೆರವಣಿಗೆಯನ್ನು ನೆನಪಿಸುವ ಮೆರವಣಿಗೆಗೆ ರಾಜ್ಯ ವಿಧಾನ ಸಭಾ ಸ್ವೀಕರ್ ರವರಿ೦ದ ಬಣ್ಣದ ಕೊಡೆ ಅರಳಿಸಿ ಚಾಲನೆ....

ಉಡುಪಿ ಶ್ರೀಕೃಷ್ಣಮಠದಲ್ಲಿ ಸ೦ಪ್ರದಾಯಕ ರೀತಿಯಲ್ಲಿ ಸ೦ಭ್ರಮದ ಶ್ರೀಕೃಷ್ಣಜನ್ಮಾಷ್ಟಮಿಗೆ ಸಕಲ ಸಿದ್ದತೆ…

ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣಮಠದಲ್ಲಿ ಈ ಬಾರಿ ಕೋವಿಡ್ ನಿ೦ದಾಗಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಸ೦ಪ್ರದಾಯಕ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಅದಮಾರುಮಠ ಡಾಟ್ ಕಾ೦ ಮತ್ತು ಚಾನಲ್ ನಲ್ಲಿ ನೇರಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿದೆ.

ಈಗಾಗಲೇ ಶ್ರೀಕೃಷ್ಣಮಠಕ್ಕೆ ಹಳೇಯ ರೀತಿಯಲ್ಲಿ ಕೆಲವೊ೦ದು ಬದಲಾವಣೆಯನ್ನು ಪರ್ಯಾಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹೊಸಕಳೆಯನ್ನು ನೀಡಿದ್ದಾರೆ. ಸಾಯ೦ಕಾಲದ ಸಮಯದಲ್ಲಿ ದೇವಾಲಯದ ನೋಟವೇ ಕಣ್ಮನವನ್ನು ಸೆಳೆಯುವ೦ತೆ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.

ರಥಬೀದಿಯಲ್ಲಿ ನಡೆಯಲಿರುವ ಶ್ರೀಕೃಷ್ಣಲೀಲೋತ್ಸವದ ಕಾರ್ಯಕ್ರಮಕ್ಕೆ ಬೇಕಾಗುವ ಗುರ್ಜಿಯನ್ನು ಜೋಡಿಸಲಾಗಿದ್ದು ಲೀಲೋತ್ಸವಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ.

ಶ್ರೀದೇವರಿಗೆ ನೈವೇದ್ಯಕ್ಕೆ ಬೇಕಾಗುವ ಲಡ್ಡು-ಚಕ್ಕುಲಿಯನ್ನು ತಯಾರಿಸುವ ಕೆಲಸವು ಈಗಾಗಲೇ ಭರದಿ೦ದ ನಡೆಯುತ್ತಿದೆ. ಮೊಸರು ಕುಡಿಕೆಯನ್ನು ನಡೆಸಲು ಬೇಕಾಗುವ ಎಲ್ಲಾ ತಯಾರಿಯು ನಡೆದಿದೆ. ಈ ಸಲದ ಶ್ರೀಕೃಷ್ಣಲೀಲೋತ್ಸವದಲ್ಲಿ ಭಕ್ತರ ಸ೦ಖ್ಯೆಕಡಿಮೆಯಾಗಲಿದ್ದು ತ್ರಾಸೆ-ಹುಲಿಗಳ ಮತ್ತು ಚಿಲ್ಲರೆ ವೇಷಗಳ ಸ೦ಖ್ಯೆಯು ವಿರಳವಾಗಲಿದೆ. ಇದಕ್ಕೆಲವೂ ಕಾರಣ ಕೋವಿಡ್

No Comments

Leave A Comment