Log In
BREAKING NEWS >
ಮಾ.5ರ೦ದು ಬೆಳಿಗ್ಗೆ 8ಗ೦ಟೆಗೆ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮ ಜರಗಲಿದೆ....

ನಟಿ ಕಂಗನಾ ಡ್ರಗ್ಸ್ ಸೇವಿಸುವಂತೆ ಒತ್ತಾಯಿಸಿದ್ದರು: ಯುವ ನಟನ ಹಳೆಯ ವಿಡಿಯೋ ವೈರಲ್

ಮುಂಬೈ: ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಬಾಲಿವುಡ್‌ನಲ್ಲಿ ಹಲವರಿಗೆ ಡ್ರಗ್ಸ್ ವ್ಯಸನ ಇರುವುದಾಗಿ ಆರೋಪ ಮಾಡಿದ್ದ ನಟಿ ಕಂಗನಾ ರನೌತ್ ಅವರನ್ನೇ  ಡ್ರಗ್ಸ್ ಉರುಳು ಸುತ್ತಿಕೊಳ್ಳುವಂತೆ ಕಾಣುತ್ತಿದೆ.

‘ಮಾದಕ ವಸ್ತು ಸೇವಿಸಿದ್ದಾರೋ ಇಲ್ಲವೋ ಎಂದು ರಕ್ತಪರೀಕ್ಷೆ ಮಾಡಿಸಿದರೆ ಅರ್ಧ ಬಾಲಿವುಡ್‌ ಸ್ಟಾರ್‌ಗಳು ಜೈಲು ಸೇರುತ್ತಾರೆ’ ಎಂದಿದ್ದ ಕಂಗನಾ, ರಣಬೀರ್ ಕಪೂರ್, ರಣ್ವೀರ್ ಸಿಂಗ್ ಹಾಗೂ ವಿಕ್ಕಿ ಕೌಶನ್ ಪ್ರತಿದಿನ ಡ್ರಗ್ಸ್ ಸೇವಿಸುತ್ತಾರೆ ಎಂದು ನೇರ ಆರೋಪ ಮಾಡಿದ್ದರು.

ಇದೀಗ ಯುವ ನಟ ಅಧ್ಯಾಯನ್ ಸುಮನ್ ಹೇಳಿಕೆಯ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಹೌದು ಅಧ್ಯಾಯನ್ ತಮ್ಮ ಸಂದರ್ಶನದಲ್ಲಿ ನಟಿ ಕಂಗನಾ ಡ್ರಗ್ಸ್ ಸೇವಿಸುವಂತೆ ಒತ್ತಾಯಿಸಿದ್ದರು ಎಂದು ಹೇಳಿದ್ದರು. ಇದೇ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವ ಕಂಗನಾ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಂಗನಾ, ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ, ನನ್ನ ಕರೆ ದಾಖಲೆಗಳನ್ನು ತನಿಖೆ ಮಾಡಿ, ಅದರಲ್ಲಿ ಡ್ರಗ್ಸ್ ಗೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತರೂ ನನ್ನ ತಪ್ಪನ್ನು ಒಪ್ಪಿಕೊಂಡು ಶಾಶ್ವತವಾಗಿ ಮುಂಬೈ ತೊರೆಯುತ್ತೇನೆ ಎಂದು ಕಂಗನಾ ಸವಾಲು ಹಾಕಿದ್ದರು.

No Comments

Leave A Comment