Log In
BREAKING NEWS >
ಉಡುಪಿ ಶ್ರೀಕೃಷ್ಣಾಪುರ ಮಠಾಧೀಶರ 4ನೇ ಪರ್ಯಾಯಕ್ಕೆ ಅದ್ದೂರಿಯ ಬಾಳೆ ಮುಹೂರ್ತ.........ರಾಮಮಂದಿರ ನಿರ್ಮಾಣಕ್ಕೆ ಜ.15ರಿಂದ ಧನ ಸಂಗ್ರಹ ಕಾರ್ಯ; ಪೇಜಾವರ ಶ್ರೀ...

‘ಎವರು’ ರಿಮೇಕ್‌ನಲ್ಲಿ ದಿಗಂತ್ ಗೆ ಜೋಡಿಯಾದ ಹರಿಪ್ರಿಯಾ

ಐತಿಹಾಸಿಕ ಚಿತ್ರ “ಬಿಚ್ಚುಗತ್ತಿ ಚಾಪ್ಟರ್  1 ದಳವಾಯಿ ದಂಗೆ” ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡ ಹರಿಪ್ರಿಯಾ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಅಮೃತಮತಿ ಮತ್ತು ಜಯಣ್ಣ ಪ್ರೊಡಕ್ಷನ್ಸ್ ನಿರ್ಮಿಸಿದ ಗುರುನಂದನ್ ಅಭಿನಯದ ಇನ್ನೂ ಹೆಸರಿಡದ  ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

ಇದೀಗ ನಟಿ ತೆಲುಗು ಚಿತ್ರ ಎವರು  ಕನ್ನಡದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು  ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ದಿಗಂತ್ ಗೆ ಜೋಡಿಯಾಗಲಿದ್ದಾರೆ.

 ಸ್ಪ್ಯಾನಿಷ್ ಮಿಸ್ಟರಿ ಥ್ರಿಲ್ಲರ್ ದಿ ಇನ್ವಿಸಿಬಲ್ ಗೆಸ್ಟ್ ನಿಂದ ಸ್ಫೂರ್ತಿ ಪಡೆದಿದೆ. ಇದು ಆದ ಶೇಷ,  ನವೀನ್ ಚಂದ್ರ ಮತ್ತು ರೆಜಿನಾ ಕಸ್ಸಂದ್ರ  ಅಭಿನಯದ 2019 ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದ್ದ ಟಾಲಿವುಡ್ ಚಿತ್ರಗಳಲ್ಲಿ ಒಂದಾಗಿತ್ತು.

No Comments

Leave A Comment