Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಪಾಕ್ ನಲ್ಲಿ ಗಣಿ ಕುಸಿತ: ಉತ್ಖನನದಲ್ಲಿ ನಿರತರಾಗಿದ್ದ 22 ಜನರು ಸಾವು, ಹಲವರ ಸ್ಥಿತಿ ಗಂಭೀರ

ಪೇಷಾವರ: ಪಾಕಿಸ್ತಾನದ ಜಿಯಾರತ್ ಘರ್ ಪರ್ವತ ಪ್ರದೇಶದ ಮಾರ್ಬಲ್ (ಅಮೃತಶಿಲೆಯ) ಕ್ವಾರಿಯಲ್ಲಿ ಸಂಭವಿಸಿದ ಗಣಿ ಕುಸಿತದಿಂದಾಗಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ, ಮತ್ತು ಅವಶೇಷಗಳಡಿ ಅನೇಕರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

ಅತ್ಯುತ್ತಮ ಗುಣಮಟ್ಟದ ಅಮೃತಶಿಲೆಗೆ ಹೆಸರುವಾಸಿಯಾದ ಅಫಘಾನಿಸ್ತಾನ್ ಗಡಿಯಲ್ಲಿರುವ ಈ ಪ್ರದೇಶದಲ್ಲಿ ಆರು ಘಟಕಗಳ ಅಮೃತಶಿಲೆ ಗಣಿಗಳು ಸೋಮವಾರ ರಾತ್ರಿ ಕುಸಿದಿವೆ. ಇದುವರೆಗೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಇಂದೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಕ್ಷಣಾ ಕಾರ್ಯಗಳಿಗೆ ಭಾರೀ ಗಾತ್ರದ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಜಿಯಾರತ್ ಘರ್ ಪರ್ವತದಲ್ಲಿನ ಆರು ಗಣಿಗಳು ಏಕಾಏಕಿ ಕುಸಿದಿದ್ದರಿಂದ ಕಾರ್ಮಿಕರ ಮೇಲೆ ಭಾರೀ ಗಾತ್ರದ ಬಂಡೆಗಳು ಉರುಳಿಬಿದ್ದಿದೆ. ಸ್ಥಳದಲ್ಲೇ 12 ಜನರು ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಇನ್ನೂ 10 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟವರಲ್ಲಿ ಅನೇಕರು ಪ್ರಾಂತೀಯ ರಾಜಧಾನಿ ಪೇಶಾವರದಿಂದ 85 ಕಿ.ಮೀ ದೂರದಲ್ಲಿರುವ ಅಫ್ಘಾನಿಸ್ತಾನ ಗಡಿಯ ಬಳಿಯಿರುವ.ಸಫಿ ಪ್ರದೇಶದವರು. ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿ ಬಿದ್ದಿದ್ದು ಮೃತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಗಣಿ ಕುಸಿದಾಗ ಸುಮಾರು 45 ಕಾರ್ಮಿಕರು ಉತ್ಖನನ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಈಗಾಗಲೇ ಒಂಬತ್ತು ಜನರನ್ನು ರಕ್ಷಿಸಲಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ತಿಳಿಸಿದೆ.

No Comments

Leave A Comment