Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಸ್ಯಾಂಡಲ್‌ವುಡ್‌ ಜತೆ ಮಾಲಿವುಡ್‌ ಡ್ರಗ್ಸ್‌ ನಂಟು

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ಲ್ಲಿ ಕೇಳಿ ಬಂದಿದ್ದ ಡ್ರಗ್ಸ್‌ ಪ್ರಕರಣದಲ್ಲಿ ಬಾಲಿವುಡ್‌  ನಂಟಿನ ಬಗ್ಗೆ ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಕೇರಳ ಮೂಲದ ನಟ ನಿಯಾಜ್‌ ಮೊಹ ಮ್ಮದ್‌ ಬಂಧನದಿಂದ ಈ ಪ್ರಕರಣಮಾಲಿವುಡ್‌ಗೂ ಸಂಬಂಧವಿದೆಯೇ ಎಂಬ ಹಲವು ಪ್ರಶ್ನೆ ಹುಟ್ಟುಹಾಕಿದೆ.

ಮಲೆಯಾಳಂ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಿಯಾಜ್‌ ಮೊಹಮ್ಮದ್‌, ಬೆಂಗಳೂರಿನ ಪಾರ್ಟಿ ಯೊಂದರಲ್ಲಿ ಪರಿಚಯಿಸಿ ಕೊಂಡಿದ್ದ. ಅನಂತರ ಕೇರಳದಲ್ಲಿ ತಾನೇ ಆಯೋಜಿಸಿದ್ದ ಪಾರ್ಟಿಗೆ ಸಂಜನಾಗೆ ಆಹ್ವಾನಿಸಿದ್ದಾನೆ. ಆ ಬಳಿಕ ಇಬ್ಬರು ಸ್ನೇಹಿತರಾಗಿ ದ್ದರು. ಆರೋಪಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಕೇರಳದ ಕೆಲ ಪ್ರಸಿದ್ದ ನಟ-ನಟಿಯರು ಹಾಗೂ ಪೇಜ್‌-3 ಸ್ಟಾರ್‌ಗಳು ಆಗಮಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.ಹೀಗಾಗಿ ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಮಾಲಿವುಡ್‌ ಸ್ಟಾರ್‌ಗಳಿಗೂ ಕಂಟಕವಾಗಬಹುದು ಎಂದು ಹೇಳಲಾಗಿದೆ.

ಸ್ಟಾರ್‌ ಹೋಟೆಲ್‌ಗ‌ಳಲ್ಲಿ ನಿಯಾಜ್‌ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಸಂಜನಾ ಗಲ್ರಾನಿ ಮುಖ್ಯ ಅತಿಥಿಯಾಗಿ ದ್ದರು. ಅಲ್ಲದೆ, ಕಳೆದ ಜುಲೈನಲ್ಲಿ ನಿಯಾಜ್‌ ಕೋವಿಡ್ ಸಂಬಂಧ ಮಾಸ್ಕ್ ತಯಾರು ಮಾಡುತ್ತಿದ್ದ. ಅದಕ್ಕೆ ಸಂಜನಾ ಆತ ತಯಾರು ಮಾಡಿದ್ದ ಮಾಸ್ಕ್ ಧರಿಸಿ, ಹೆಚ್ಚಿನ ಎನ್‌-95 ಮಾಸ್ಕ್ ಬೇಕೆಂದರೆ ನಿಯಾಜ್‌ ಮೊಹಮ್ಮದ್‌ ಸಂಪರ್ಕಿಸಿ ಎಂದು ಪ್ರಮೋಷನ್‌ ಕೊಟ್ಟಿದ್ದಾರೆ. ನಗರದ ವಿವಿಧೆಡೆ ನಿಯಾಜ್‌ ಪಾರ್ಟಿ ಆಯೋಜಿಸುತ್ತಿದ್ದ ಎನ್ನಲಾಗಿದೆ.

ಒಂದೇ ಕೊಠಡಿಯಲ್ಲಿ ರಾಗಿಣಿ, ಸಂಜನಾ : ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಂದೇ ಕೊಠಡಿ ಇದ್ದು, ಐದು ಬೆಡ್‌ಗಳಿವೆ. ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿಯನ್ನು ಒಂದೇ ಕೊಠಡಿಯಲ್ಲಿ ಇಡಲಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಪರಸ್ಪರ ಮಾತುಕತೆ ಅಥವಾ ಚರ್ಚೆಯಲ್ಲಿ ತೊಡಗದಂತೆ ಮೂವರು ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೊರಗಡೆ ಪುರುಷ ಪೊಲೀಸರನ್ನು ನೇಮಿಸಲಾಗಿದೆ.

ವಿಚಾರಣೆಗೆ ರಾಗಿಣಿ ನಿರಾಕರಣೆ : ನಟಿ ರಾಗಿಣಿ ಮಂಗಳವಾರ ಕೂಡ ವಿಚಾರಣೆಗೆ ಅಸಹಕಾರ ತೋರಿದ್ದಾರೆ. ತಮಗೆ ಅಲರ್ಜಿ ಮತ್ತು ಬೆನ್ನು ನೋವು ಕಡಿಮೆಯಾಗಿಲ್ಲ. ಹೆಚ್ಚಿಗೆ ಮಾತನಾಡಲು ಸಾಧ್ಯವಿಲ್ಲ. ಕಾಲವಕಾಶ ನೀಡಿ ಎಂದು ಕೇಳಿ ಕೊಂಡಿ ದ್ದಾರೆ ಎಂದು ಸಿಸಿಬಿಯ ಅಧಿಕಾರಿಗಳು ಮಾಹಿತಿ ನೀಡಿದರು.

ರಾಕಿ ಬ್ರದರ್‌ ನಿಯಾಜ್‌! : ನಟಿ ಸಂಜನಾ ಗಲ್ರಾನಿಗೆ ರಾಹುಲ್‌ ಟೋನ್ಶಿ ಮಾತ್ರವಲ್ಲದೆ, ನಿಯಾಜ್‌ ಮೊಹಮ್ಮದ್‌ ಕೂಡ ‘ರಾಕಿ ಬ್ರದರ್‌’ ಆಗಿದ್ದಾನೆ. ಈ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿತ್ತು. ನಿಯಾಜ್‌ ಒಡೆತನದ 360 ಡಿಗ್ರಿ ಫೋಟೊಗ್ರಫಿಯಲ್ಲಿ ಪಾಲು ಹೊಂದಿರುವ ಶಂಕೆಯಿದ್ದು, ಆ ಬಗ್ಗೆ ತನಿಖೆ ನಡೆದಿದೆ ಎಂದು ಹೇಳಲಾಗಿದೆ. ಈತ ಫ್ಯಾಷನ್‌ ಶೋ ಕುರಿತ ಜಾಹಿರಾತು ಸಂಸ್ಥೆ ನಡೆಸುತ್ತಿರುವುದರಿಂದ ಕೆಲವೊಂದು ಫ್ಯಾಷನ್‌ ಶೋ ಕಾರ್ಯಕ್ರಮಗಳಿಗೆ ತೀರ್ಪುಗಾರನಾಗಿ ಹೋಗುತ್ತಿದ್ದ. ನಗರಕ್ಕೆ ಪಾರ್ಟಿಗೆಂದು ಬಂದಾಗ ಮಾದಕ ವಸ್ತು ಪೂರೈಸುತ್ತಿದ್ದ ಎನ್ನಲಾಗಿದ್ದು, ಪಾರ್ಟಿ ಹೆಸರಲ್ಲಿ ಡ್ರಗ್‌ ದಂಧೆ ನಡೆಯುತ್ತಿತ್ತು.

ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದ ಸಂಜನಾ : 2006ರಲ್ಲಿ “ಗಂಡ ಹೆಂಡತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಸಂಜನಾ, ಮೊದಲ ಚಿತ್ರದಲ್ಲೇ ಚಿತ್ರರಂಗ ಹಾಗೂ ಸಿನಿಪ್ರೇಮಿಗಳು ಹುಬ್ಬೇರಿಸುವಂತೆ ಮಾಡಿದವರು. ಹಿಂದಿಯಲ್ಲಿ ಹಿಟ್‌ ಆಗಿದ್ದ “ಮರ್ಡರ್‌’ ಚಿತ್ರದ ರೀಮೇಕ್‌ “ಗಂಡ ಹೆಂಡತಿ’ ಚಿತ್ರದಲ್ಲಿ ಸಂಜನಾ ಮೈ ಚಳಿ ಬಿಟ್ಟು ಬೋಲ್ಡ್‌ ಆಗಿ ನಟಿಸುವ ಮೂಲಕ 14 ವರ್ಷಗಳ ಹಿಂದೆಯೇ ತಾನು ಬೋಲ್ಡ್‌ ನಟಿ ಎಂದು ಸಾಬೀತು ಮಾಡಿದವರು. ನಟಿಯೊಬ್ಬಳ ಮೊದಲ ಚಿತ್ರವೇ ಅಷ್ಟೊಂದು ಬೋಲ್ಡ್‌ ಆದ ಪರಿಣಾಮವೋ ಏನೋ, ನಂತರದ ವರ್ಷಗಳಲ್ಲಿ ಸಂಜನಾಗೆ ನಾಯಕಿಯಾಗಿ ದೊಡ್ಡ ಅವಕಾಶಗಳಾಗಲೀ, ಸ್ಟಾರ್‌ ಸಿನಿಮಾಗಳಿಂದ ಆಫ‌ರ್‌ಗಳಾಗಲೀ ಬರಲಿಲ್ಲ. ಹಾಗಂತ ಸಂಜನಾ ಜರ್ನಿ ಅಲ್ಲಿಗೆ ನಿಲ್ಲಿಸದೇ ಸಿಕ್ಕ ಅವಕಾಶಗಳಲ್ಲಿ “ಸ್ಟಾರ್‌’ ಎನಿಸಿಕೊಳ್ಳಲು ಪ್ರಯತ್ನಿಸಿದರು. ಸಿನಿಮಾಗಳ ಸ್ಪೆಷಲ್‌ ಸಾಂಗ್‌, ಗೆಸ್ಟ್‌ ಅಪಿಯರೆನ್ಸ್‌ … ಹೀಗೆ ಬಿಝಿಯಾಗಿರಲು ಪ್ರಯತ್ನಿಸಿದ ಸಂಜನಾ, ಒಂದಷ್ಟು ತೆಲುಗು ಸಿನಿಮಾಗಳಲ್ಲೂ ನಟಿಸುವ ಮೂಲಕ, ತಾನು ತೆಲುಗಿನಲ್ಲೂ ಬಿಝಿ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಸಂಜನಾ ನಟಿಸಿದ್ದಾರೆ. ಹಾಗಂತ ಯಾವ ಪಾತ್ರವೂ ಅವರಿಗೆ ದೊಡ್ಡ ಬ್ರೇಕ್‌ ಕೊಟ್ಟಿಲ್ಲ. ಸಿನಿಮಾಕ್ಕೆ ಬರುವ ಮುನ್ನ ಸಂಜನಾ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

No Comments

Leave A Comment