Log In
BREAKING NEWS >
ಸೋಮವಾರದಿ೦ದ ಚಿನ್ನಾಭರಣದ ಅ೦ಗಡಿ ಅಲ್ ಲಾಕ್ -ಚಿನ್ನ ಖರೀದಿಸಲೊ೦ದು ಅವಕಾಶ...

ಕೊರೋನಾ ಗೆದ್ದ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ!

ಚೆನ್ನೈ: ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಹೊಸದಾಗಿ ನಡೆಸಿದ  ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಅವರ ಪುತ್ರ ಎಸ್ ಪಿ ಚರಣ್  ಹೇಳಿದ್ದಾರೆ.

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಾಗಿರುವ ಡಾ. ಎಸ್ ಪಿ ಬಿ ಅವರಿಗೆ ಕಳೆದ ಕೆಲವು ದಿನಗಳಿಂದ ವಿದೇಶಿ ವೈದ್ಯರಿಂದ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.

ಈ ಕ್ರಮವಾಗಿ ಅವರಿಗೆ ಹೊಸದಾಗಿ ನಡೆಸಲಾದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್   ವರದಿ ಬಂದಿದೆ. ಆದರೆ ತಂದೆಯವರ ಶ್ವಾಸಕೋಶದಲ್ಲಿ ಇನ್ನೂ ಸ್ವಲ್ಪ ಸೋಂಕಿದ್ದು,   ಇನ್ನೊಂದು ವಾರದಲ್ಲಿ ಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

74 ವರ್ಷದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸತತ 32 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಅವರು ಬಹುಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

No Comments

Leave A Comment